ಅಶ್ರಫ್ ಕಿನಾರ ಮಂಗಳೂರು
ಉಪಾಧ್ಯಕ್ಷ ರು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ
ಮಂಗಳೂರು: ಕುದ್ರೋಳಿ ಹಾಗೂ ಬೆಂಗರೆಯ ಹದಿಹರೆಯದ ವಿದ್ಯಾರ್ಥಿ ಗಳನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ.. ಅಮಾನವೀಯ ಹೇಯ ಕೃತ್ಯ ವೆಷಗಿ ವಿಡಿಯೋ ವೈರಲ್ ಮಾಡಿದ್ದು ಖಂಡನೀಯ. ಇತ್ತೀಚಿಗೆ ಕ್ಷುಲ್ಲಕ ಕಾರಣವನ್ನು ನೆಪವಾಗಿಸಿ ಅಡ್ಯಾರ್ ಭಾಗದ ಕೆಲವು ಯುವ ಪೀಳಿಗೆಯ ತಂಡಗಳು ಕಾರುಗಳನ್ನು ಬಳಸಿ ಅಮಾಯಕ ವಿದ್ಯಾರ್ಥಿಗಳನ್ನು ಅಪಹರಿಸಿ ಹಲ್ಲೆ ನಡೆಸುವುದು,ಬಟ್ಟೆ ಕಳಚುವುದು,ಸಿಗರೇಟು ಇಟ್ಟು ಚುಚ್ಚುವುದು,ಚಾಕು ಬಿಸಿ ಮಾಡಿ ಇಡುವುದು.ಇಂತಹ ಹೇಯ ಕೃತ್ಯಗಳು ಮಾಡುತ್ತಿರುವುದು ಬಹಳ ಖಂಡನೀಯ, ಕಾಸರಗೋಡು ಎಂಎಲ್ ಎ ಅಶ್ರಫ್ ರವರ ಸಂಭಂದಿ ಅಲೋಷಿಯಸ್ ವಿದ್ಯಾರ್ಥಿಗಳನ್ನು ಅಪಹರಿಸಿ ಇದೇ ತರ ಮಾಡಿದ್ದರು ಬಂದರು ಠಾಣೆಯಲ್ಲಿ ದೂರು ದಾಖಲಾಗಿತ್ತು.ನಂತರ ಬಂದರ್ ನಲ್ಲೂ ಈ ಭಾಗದ ಕೆಲವು ಯುವಕರು ಬಂದರಿನ ಯುವಕರಿಗೆ ಹೊಡೆದಿದ್ದರು. ಇದೀಗ ಕುದ್ರೋಳಿ ವಿದ್ಯಾರ್ಥಿಗಳು…ಈ ರೀತಿ ಮುಂದುವರಿಯುತ್ತಿದೆ.
ಇವರಿಗೆ ಕಣ್ಣೂರು ಭಾಗದಲ್ಲಿ ಕೆಲವು ಪ್ಲಾಟ್ ಗಳಿವೆ.. ಇವರಲ್ಲಿ ಕೆಲವು ಕಾರುಗಳಿವೆ. ಇಂತಹ ಎಲ್ಲಾ ಸ್ವತ್ತುಗಳನ್ನು ಅಧಿಕಾರಿಗಳು ಮುಟ್ಟುಗೋಳು ಹಾಕಿಸಿ ಕೊಳ್ಳಬೇಕು. ಈ ಕೃತ್ಯದಲ್ಲಿ ಬಾಗಿಯಾದವರ ಹೆಡೆಮುರಿ ಕಟ್ಟಿ ಕಾನೂನಿನ ಬಿಸಿ ಮುಟ್ಟಿಸಬೇಕು..ಇವರನ್ನು ಬೆಳೆಸುವ ಕೆಲವು ಕ್ರಿಮಿನಲ್ ಹಿನ್ನೆಲೆಯವರಿದ್ದಾರೆ. ಅವರಿಗೂ ಇವರಿಗೆ ಒಂದೆರಡು ರಾಜಕೀಯ ನಾಯಕರುಗಳ ನೆರವೂ ಇದೆ ಇವರೆಲ್ಲರಿಗೂ ಪೋಲೀಸ್ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕು.