ಎಸ್‌ವೈಎಸ್ ದೇರಳಕಟ್ಟೆ ಝೋನ್ ವತಿಯಿಂದ ತಜ್‌ದೀದ್ ಲೀಡರ್ಸ್ ಇವೆಂಟ್ ಕಾರ್ಯಕ್ರಮವು ಬದ್ಯಾರ್ ಖುವ್ವತುಲ್ ಇಸ್ಲಾಂ ಮದ್ರಸದಲ್ಲಿ ನಡೆಯಿತು. ಝೋನ್ ಅಧ್ಯಕ್ಷರಾದ ತೌಸೀಫ್ ಸಅದಿ ಹರೇಕಳ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆ (ವೆಸ್ಟ್) ಅಧ್ಯಕ್ಷ ಇಸ್ಹಾಕ್ ಝುಹ್ರಿ ಕಾನೆಕೆರೆ ಸಭೆಯನ್ನು ಉದ್ಘಾಟಿಸಿದರು.ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ‘ಸುನ್ನೀ’ ಎಂಬ ವಿಷಯದಲ್ಲೂ, ಎಸ್ಸೆಸ್ಸೆಫ್ ಕೇರಳ ರಾಜ್ಯ ಕಾರ್ಯದರ್ಶಿ ಅನಸ್ ಅಮಾನಿ ಪುಷ್ಪಗಿರಿಯವರು ‘ಸಂಘಟನೆ’ ಎಂಬ ವಿಷಯದಲ್ಲಿ ತರಗತಿ ಮಂಡಿಸಿದರು. ಎಸ್‌ವೈಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ ಸಿದ್ದೀಕ್ ಮೋಂಟುಗೋಳಿ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೆಹಬೂಬ್ ಸಖಾಫಿ ಕಿನ್ಯ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಇಸಾಬಾ ಕಾರ್ಯದರ್ಶಿ ಫಾರೂಕ್ ಶೇಡಿಗುರಿ, ಕೆಸಿಎಫ್ ನಾಯಕರಾದ ಹುಸೈನ್ ಇನೋಳಿ, ಝೋನ್ ನಾಯಕರಾದ ಸ್ವಾಲಿಹ್ ರೆಂಜಾಡಿ, ಹನೀಫ್ ಸಖಾಫಿ ನಾಟೆಕಲ್, ಹೈದರ್ ಅಲಿ ಹಿಮಮಿ, ಮುಸ್ತಫ ಸಅದಿ, ಹಮೀದ್ ಕಿನ್ಯ, ಸ್ವಾಗತ ಸಮಿತಿ ಚೇರ್ಮನ್ ಮುತ್ತಲಿಬ್ ಸಖಾಫಿ, ಕನ್ವೀನರ್ ಉಸ್ಮಾನ್ ಫಜೀರ್, ಫಿನಾನ್ಸ್ ಸೆಕ್ರೆಟರಿ ಹನೀಫ್ ಬದ್ಯಾರ್, ಫಾರೂಕ್ ಸಖಾಫಿ ಕಿನ್ಯ, ಶಾಫಿ ಮದನಿ ಹರೇಕಳ, ಮುಬೀನ್ ಮಲಾರ್, ಜಲೀಲ್ ಆರ್.ಜಿ.ನಗರ, ಉಸ್ಮಾನ್ ನ್ಯೂಪಡ್ಪು, ಅಲ್ತಾಫ್ ಫಾಳಿಲಿ ಇನೋಳಿ ಹಾಗೂ ಝೋನ್ ವ್ಯಾಪ್ತಿಯ ಐದು ಸರ್ಕಲ್ ಎಕ್ಸಿಕ್ಯೂಟಿವ್ ಹಾಗೂ ಮೂವತ್ತೆರಡು ಯೂನಿಟ್ ಕ್ಯಾಬಿನೆಟ್ ನಾಯಕರು ಭಾಗವಹಿಸಿದ್ದರು.ಝೋನ್ ಕೋಶಾಧಿಕಾರಿ ಉಸ್ಮಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Kannada Online News Paper