ದುಬೈ : ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ದುಬೈ ನಾರ್ತ್ ಝೋನ್ ವತಿಯಿಂದ ಖುರ್ರತುಸ್ಸಾದತ್ ಸೆಯ್ಯಿದ್ ಫಝಲ್ ಕೋಯಮ್ಮ ತಂಙಲ್ ಕೂರತ್ ರವರ ಅನುಸ್ಮರಣಾ ಕಾರ್ಯಕ್ರಮ ದುಬೈ ದೇರಾದಲ್ಲಿರುವ ಲ್ಯಾನ್ಡ್ ಮಾರ್ಕ್ ಹೋ\nಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಸಲಾಯಿತು.
ಸೆಯ್ಯಿದ್ ಫಝಲ್ ತಂಙಲ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಅಬ್ದುಲ್ ಅಝೀಝ್ ಲತೀಫಿ ಉದ್ಘಾಟನೆ ಮಾಡಿದರು. ದುಬೈ ನಾರ್ತ್ ಝೋನ್ ಅಧ್ಯಕ್ಷರು ಇಸ್ಮಾಯಿಲ್ ಹಾಜಿ ಮದನಿ ನಗರ ಅಧ್ಯಕ್ಷತೆ ವಹಿಸಿದರು.
ಕೆಸಿಎಫ್ ಅಂತಾರಾಷ್ಟ್ರೀಯ ಸಂಘಟನಾ ವಿಭಾಗ ಚೈರ್ಮ್ಯಾನ್ ಅಬ್ದುಲ್ ಜಲೀಲ್ ನಿಜಾಮಿ ಅನುಸ್ಮರಣಾ ಭಾಷಣ ಮಾಡಿದರು.
ಇಬ್ರಾಹಿಂ ಮದನಿ ಉಸ್ತಾದ್, ಆಶ್ರಫ್ ಹಾಜಿ ಅಡ್ಯಾರ್, ಅಬ್ದುಲ್ ಖಾದರ್ ಸಾಲೆತ್ತೂರ್,
ಫಾಹಿಝ್ ಅಹ್ಮದ್,
ಉಮೈದ್, ಇರ್ಬಾಝ್ ಅಹ್ಮದ್
ಶೈಖ್ ಇಮಾಮ್ ‘ ರಝಕ್ ಕಾಂತಡ್ಕ ಮುಂತಾದವರು ಉಪಸ್ಥಿತರಿದ್ದರು.
ಕೆಸಿಎಫ್ ದುಬೈ ನಾರ್ತ್ ಝೋನ್ ಶಿಕ್ಷಣ ವಿಭಾಗ ಅಧ್ಯಕ್ಸರಾದ ಅಬ್ದುಲ್ ಹಮೀದ್ ಸಖಾಫಿ ಬೆಳ್ಳಾರೆ ನೇತೃತ್ವದಲ್ಲಿ ಮೌಲಿದ್ ಮತ್ತು ತಹ್ಲೀಲ್ ಮಜ್ಲಿಸ್ ನಡೆಸಲಾಯಿತು.
ಮುಸ್ತಫ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಝೋನ್ ಶಿಕ್ಷಣ ವಿಭಾಗ ಕಾರ್ಯದರ್ಶಿ ಹಬೀಬ್ ಸಜಿಪ ಧನ್ಯವಾದವಿತ್ತರು.