janadhvani

Kannada Online News Paper

KCF ಸೌದಿ ಅರೇಬಿಯಾ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ

ವಿಟ್ಲ: KCF Deccenium ಭಾಗವಾಗಿ ಸೌದಿ ರಾಷ್ಟ್ರೀಯ ಸಮಿತಿ ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ
ನೀರಿನ ಘಟಕ ಸರಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೆರುವಾಯಿ , ಬಂಟ್ವಾಳ ತಾಲೂಕು ಇಲ್ಲಿ ಹಸ್ತಾಂತರಿಸಲಾಯಿತು.

KCF ಸೌದಿ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುಹಮ್ಮದ್ ಕಳ್ಳರ್ಬೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. Deccenium ಸೌದಿ ಚೈರ್ಮನ್ ಸಿದ್ದಿಕ್ ಸಖಾಫಿ ಪೆರುವಾಯಿ ಕೆಸಿಎಫ್ ನ ಕೊಡುಗೆಗಳ ಬಗ್ಗೆ ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ SMA ಮಾಜಿ ದ ಕ ಜಿಲ್ಲಾ ಉಪಾಧ್ಯಕ್ಷ ಇಸ್ಮಾಯಿಲ್, SYS ಉಕ್ಕುಡ ಸರ್ಕಲ್ ಕೋಶಾಧಿಕಾರಿ ಅಬ್ದುಲ್ ಅಝೀಝ್, SSF ವಿಟ್ಲ ಡಿವಿಷನ್ ಅದ್ಯಕ್ಷ ಹಾರಿಸ್ ಹಿಮಮಿ ಶಾಲಾ ಸಂಚಾಲಕ ಸಚಿನ್ ಬಟ್ , ಪೆರುವಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಮುಖ್ಯ ಶಿಕ್ಷಕ ಶ್ರೀ ಕುಂಞನ್ನ ನಾಯ್ಕ ,ವಿಧ್ಯಾರ್ಥಿ ನಾಯಕ ಹಫೀಳ್, ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ರಕ್ಷಕ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com