janadhvani

Kannada Online News Paper

ಎಸ್‌ವೈಎಸ್ ದೇರಳಕಟ್ಟೆ ಝೋನ್ ವಾರ್ಷಿಕ ಕೌನ್ಸಿಲ್

ಮಂಗಳೂರು, ಜೂ.23: ಸುನ್ನೀ ಯುವಜನ ಸಂಘ (ಎಸ್‌ವೈಎಸ್) ದೇರಳಕಟ್ಟೆ ಝೋನ್ ಇದರ ವಾರ್ಷಿಕ ಕೌನ್ಸಿಲ್ ತಿಬ್ಲೆಪದವು ರಹ್ಮಾನಿಯ ಮದ್ರಸದಲ್ಲಿ ನಡೆಯಿತು. ಝೋನ್ ಅಧ್ಯಕ್ಷರಾದ ತೌಸೀಫ್ ಸ‌ಅದಿ ಹರೇಕಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಸ್‌ವೈಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ಸಿದ್ದೀಕ್ ಮೋಂಟುಗೋಳಿ ಸಭೆಯನ್ನು ಉದ್ಘಾಟಿಸಿದರು.

ಎಸ್‌ವೈಎಸ್ ರಾಜ್ಯ ನಾಯಕ ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯ್ಯ, ಜಿಲ್ಲಾಧ್ಯಕ್ಷ ಇಸ್ಹಾಕ್ ಝುಹ್ರಿ ಕಾನೆಕೆರೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೆಹಬೂಬ್ ಸಖಾಫಿ ಕಿನ್ಯ ಶುಭ ಹಾರೈಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಾಲಿಹ್ ರೆಂಜಾಡಿ ವರದಿ ಹಾಗೂ ಕೋಶಾಧಿಕಾರಿ ಉಸ್ಮಾನ್ ಝುಹ್ರಿ ಕಿನ್ಯ ಲೆಕ್ಕ ಪತ್ರ ಮಂಡಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಹನೀಫ್ ಸಖಾಫಿ ನಾಟೆಕಲ್, ಕಾರ್ಯದರ್ಶಿಗಳಾದ ಹೈದರ್ ಹಿಮಮಿ ಮಲಾರ್, ಉಸ್ಮಾನ್ ಫಜೀರ್, ಹಮೀದ್ ಕಿನ್ಯ, ಹನೀಫ್ ಬದ್ಯಾರ್, ಐದು ಸರ್ಕಲ್‌ಗಳಿಂದ ಆಯ್ಕೆಗೊಂಡಿದ್ದ ಕೌನ್ಸಿಲರ್‌ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಝೋನ್ ಸಂಘಟನಾ ಕಾರ್ಯದರ್ಶಿ ಮುಸ್ತಫಾ ಸ‌ಅದಿ ಹರೇಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.