ರಿಯಾದ್: ಹಜ್ ಯಾತ್ರೆಯ ಸಂದರ್ಭದಲ್ಲಿ ಸಚಿವಾಲಯವು ಸಿದ್ಧಪಡಿಸಿದ ಭದ್ರತಾ ಕಾರ್ಯವಿಧಾನಗಳ ಭಾಗವಾಗಿ ಹೊಸ ಮಾರ್ಗಸೂಚಿಗಳನ್ನು ನೀಡಲಾಗಿದೆ. ಭದ್ರತೆಯ ಮತ್ತು ಹರಮ್ ನ ಸ್ವಚ್ಛತೆಯನ್ನು ಕಾಪಾಡುವ ಭಾಗವಾಗಿ, ಕಾಫಿ, ಖರ್ಜೂರ ಮತ್ತು ನೀರನ್ನು ಹೊರತುಪಡಿಸಿ ಇತರ ಆಹಾರ ಪದಾರ್ಥಗಳನ್ನು ಹರಮ್‌ಗೆ ತರುವುದನ್ನು ನಿಷೇಧಿಸಲಾಗಿದೆ.
ಯಾತ್ರಾರ್ಥಿಗಳ ಸುರಕ್ಷತೆಗಾಗಿ, ಹರಮ್ ಒಳಗೆ ಚೂಪಾದ ವಸ್ತುಗಳು ಮತ್ತು ಸುಡುವ ಅನಿಲಗಳನ್ನು ಅನುಮತಿಸಲಾಗುವುದಿಲ್ಲ. ಯಾತ್ರಿಕರು ಸಣ್ಣ ಬ್ಯಾಗನ್ನು ಕೊಂಡೊಯ್ಯಲು ಮರೆಯಬಾರದು. ದೊಡ್ಡ ಚೀಲಗಳನ್ನು ನಿರ್ಬಂಧಿಸಲಾಗಿದೆ. ಮಕ್ಕಳ ತಳ್ಳುಗಾಡಿಗಳನ್ನು ಒಳಗೆ ತರುವುದನ್ನು ಸಹ ನಿಷೇಧಿಸಲಾಗಿದೆ. ಯಾವುದೇ ತೊಂದರೆಗಳಿಲ್ಲದೆ ಸುಲಭವಾಗಿ ಹಜ್ ವಿಧಿವಿಧಾನಗಳನ್ನು ನಿರ್ವಹಿಸಲು ಸೂಚನೆಗಳನ್ನು ಅನುಸರಿಸುವ ಮಹತ್ವವನ್ನು ಸಚಿವಾಲಯವು ಎತ್ತಿ ತೋರಿಸಿದೆ.