janadhvani

Kannada Online News Paper

ಸುಮೊಟೊ ದುರ್ಬಳಕೆಯಾಗುತ್ತಿರುವ ಆತಂಕವಿದೆ- ಎಸ್ಸೆಸ್ಸೆಫ್

ಮಂಗಳೂರಿನ ನಮಾಜ್ ಪ್ರಕರಣದಲ್ಲಿ ಯಾವುದೇ ಸಾರ್ವಜನಿಕ ಸಮಸ್ಯೆ ಉಂಟಾಗಿಲ್ಲ. ಬೆರಳೆಣಿಕೆಯ ಮಂದಿ ರಸ್ತೆ ಬದಿಯಲ್ಲಿ ನಿಶಬ್ದವಾಗಿ ಐದಾರು ನಿಮಿಷಗಳ ಕಾಲ ನಮಾಜ್ ನಿರ್ವಹಿಸಿದ್ದಾರೆ.

ಬೆಂಗಳೂರು :ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ, ಕಾನೂನು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ಹಾಗೂ ದೂರುದಾರರು ಮುಂದೆ ಬರಲು ಭಯಪಡುವಂತಹ ಪ್ರಕರಣಗಳಲ್ಲಿ ದಾಖಲಿಸಬಹುದಾದ ಸುಮೋಟೂ ಕೇಸ್, ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಳಕೆಯಾಗಿರುವುದು ಆತಂಕಕಾರಿಯಾಗಿದೆ ಎಂದು ಕರ್ನಾಟಕ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ರಾಜ್ಯ ಸಮಿತಿ ಅಭಿಪ್ರಾಯಪಟ್ಟಿದೆ.

ಮಂಗಳೂರಿನ ನಮಾಜ್ ಪ್ರಕರಣದಲ್ಲಿ ಯಾವುದೇ ಸಾರ್ವಜನಿಕ ಸಮಸ್ಯೆ ಉಂಟಾಗಿಲ್ಲ. ಬೆರಳೆಣಿಕೆಯ ಮಂದಿ ರಸ್ತೆ ಬದಿಯಲ್ಲಿ ನಿಶಬ್ದವಾಗಿ ಐದಾರು ನಿಮಿಷಗಳ ಕಾಲ ನಮಾಜ್ ನಿರ್ವಹಿಸಿದ್ದಾರೆ.

ಇದನ್ನೇ ಕೆಲವು ಕ್ಷುದ್ರ ಶಕ್ತಿಗಳು ಪರ್ವತೀಕರಿಸಿವೆ. ಇಷ್ಟಕ್ಕೆ ಕದ್ರಿ ಠಾಣೆಯಲ್ಲಿ ಸುಮೊಟೊ ದಾಖಲಾಗಿರುವುದು ಖಂಡನೀಯ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಪ್ರಕಟಣೆ ತಿಳಿಸಿದೆ.

error: Content is protected !! Not allowed copy content from janadhvani.com