janadhvani

Kannada Online News Paper

ವ್ಯಾಪಾರ ವಹಿವಾಟು ಅವಧಿಯನ್ನು ಸಂಜೆ 6 ಕ್ಕೆ ಸೀಮಿತಗೊಳಿಸಬೇಕೆಂದು ಶೂರಾ ಕೌನ್ಸಿಲ್

ರಿಯಾದ್: ಸೌದಿ ಅರೇಬಿಯಾದ ವ್ಯಾಪಾರ ಕೇಂದ್ರಗಳ ವಹಿವಾಟು ಅವಧಿಯನ್ನು ಸಂಜೆ 6 ಕ್ಕೆ ಸೀಮಿತಗೊಳಿಸಬೇಕೆಂದು ಶೂರಾ ಕೌನ್ಸಿಲ್ ಸದಸ್ಯ ಒತ್ತಾಯಿಸಿದ್ದಾರೆ. ಶೂರಾ ಕೌನ್ಸಿಲ್ ಈ ಹಿಂದೆ ರಾತ್ರಿ 9ಕ್ಕೆ ಸಮಯವನ್ನು ನಿಗದಿ ಪಡಿಸುವಂತೆ ಮಂತ್ರಿ ಮಂಡಲಕ್ಕೆ ಶಿಫಾರಸ್ಸು ಮಾಡಲಾಗಿತ್ತು.

ರಾತ್ರಿ 9ಕ್ಕೆ ನಿಗದಿಪಡಿಸುವ ಬೇಡಿಕೆಯ ಬಗ್ಗೆ ವಿವರವಾದ ಚರ್ಚೆಯ ನಂತರ ಶೂರಾ ಕೌನ್ಸಿಲ್‌ನ ಶಿಫಾರಸುಗಳನ್ನು ಕ್ಯಾಬಿನೆಟ್ ಗೆ ಸಲ್ಲಿಸಲಾಗಿತ್ತು. ಶಿಫಾರಸಿಗೆ ಸಂಬಂಧಿಸಿದಂತೆ ಚೇಂಬರ್ ಆಫ್ ಕಮರ್ಷಿಯಲ್‌‌ನೊಂದಿಗೆ ಸಮಾಲೋಚನೆಯು ನಡೆಯುತ್ತಾ ಇದೆ.
ಈ ಮಧ್ಯೆ, ಶೂರಾ ಕೌನ್ಸಿಲ್‌ನ ಸದಸ್ಯ ಸಯೀದ್ ಖಾಸಿಮ್ ಅಲ್ ಖಲಿದಿ ಈ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಔಷಧಾಲಯಗಳು ಮತ್ತು ಪೆಟ್ರೋಲ್ ಪಂಪ್ ಗಳನ್ನು ಹೊರತುಪಡಿಸಿ ಇತರ ಸಂಸ್ಥೆಗಳ ಕೆಲಸದ ಸಮಯವನ್ನು 6 ಗಂಟೆಗೆ ನಿಗದಿ ಮಾಡಬೇಕೆಂದು ಅವರು ಹೇಳಿದ್ದಾರೆ.

ಮುಂಜಾನೆ ಒಂದು ಗಂಟೆಯ ವರೆಗಿನ ವ್ಯಾಪಾರ ಸ್ವದೇಶಿಗಳಿಗೆ ಅವಶ್ಯಕತೆಯಿಲ್ಲ. ಮನೆ, ಕುಟುಂಬ ಅಥವಾ ಸಾಮಾಜಿಕ ಜೀವನವಿಲ್ಲದೆ ಕೆಲಸ ಮಾಡುವ ವಿದೇಶಿಯರಿಗೆ ಕೆಲಸದ ಸಮಯವನ್ನು ಕಡಿತಗೊಳಿಸುವ ಮೂಲಕ ಪರಿಣಾಮ ಬೀರಲಿದೆ ಎಂದು ಅವರು ಹೇಳಿದರು.

ಸಮಯ ಬದಲಾವಣೆಯು ಬಿನಾಮಿ ಉದ್ಯಮಗಳನ್ನು ತಡೆಯಲು ಮತ್ತು ಸ್ಥಳೀಯ ಜನರ ನಿರುದ್ಯೋಗವನ್ನು ಪರಿಹರಿಸಲು ಸಹಾಯ ಮಾಡಲಿದೆ.
ಸೈಯದ್ ಕಾಸಿಮ್ ಅಲ್ ಖಾಲಿದಿ ಮಾತನಾಡುತ್ತಾ, ಈ ಕ್ರಮವು ಖಾಸಗಿ ವಲಯ ಪ್ರವೇಶಿಸಲು ಸ್ಥಳೀಯ ಯುವಕರಿಗೆ ಸಹಾಯ ಮಾಡಲಿದೆ ಮತ್ತು ವಿದೇಶಗಳಿಗೆ ಹಣದ ಹರಿವನ್ನು ತಡೆಯಲಿದೆ ಎಂದು ಹೇಳಿದ್ದಾರೆ.

error: Content is protected !! Not allowed copy content from janadhvani.com