ದುಬೈ: ದುಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಸ್ ಅಲ್ ಖೈಮಾಗೆ ಉಚಿತ ಬಸ್ ಸೇವೆಯನ್ನು ಪ್ರಾರಂಭಿಸಿದೆ.
ಕಳೆದ ಶುಕ್ರವಾರ ಈ ಉಚಿತ ಸೇವೆಯನ್ನು ಪ್ರಾರಂಭಿಸಲಾಗಿದ್ದು, ಸೆಪ್ಟೆಂಬರ್ 30 ರವರೆಗೆ ಬಸ್ ಪ್ರಯಾಣ ಮುಕ್ತವಾಗಿರುತ್ತದೆ. ದುಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು, ಮೂರು ಟರ್ಮಿನಲ್ ಗಳಿಂದ ಬಸ್ ಸಂಚರಿಸಲಿದೆ.
ಈ ಸೌಲಭ್ಯವು ವಾಸಿಸುವ ಮತ್ತು ಪ್ರವಾಸಿಗರಿಗೆ ಬಹಳ ಅನುಕೂಲಕರವಾಗಿದೆ.
ಸೇವೆಗೆ ವಿಶ್ವದರ್ಜೆಯ ಗುಣಮಟ್ಟದ ಬಸ್‌ಗಳನ್ನು ಬಳಸಲಾಗಿದೆ. ಉಚಿತ Wi-Fi, ಕುಡಿಯುವ ನೀರಿನ ಸಂಪರ್ಕ, ಎಮಿರೇಟ್ ರಾಸ್ ಅಲ್ ಖೈಮಾದ ವಿಶಾಲ ನಕ್ಷೆ ಎಲ್ಲವೂ ಬಸ್‌ನಲ್ಲಿ ಲಭ್ಯವಿದೆ. ರಾಸ್ ಅಲ್ ಖೈಮಾಕ್ಕೆ ಮತ್ತು ಹಿಂದಿರುಗುವ ಪ್ರಯಾಣ ಸಮಯ ಸುಮಾರು 45 ನಿಮಿಷಗಳಾಗಿವೆ. ಪ್ರತಿ ಟರ್ಮಿನಲ್ ಗೆ ದಿನನಿತ್ಯ ಆರು ಸೇವೆಗಳಿವೆ. ಬುಕ್ಕಿಂಗ್ ವೇಳೆ ನಿಖರವಾಗಿ ಹೊರಡುವ/ಇಳಿಯುವ ಸಮಯವನ್ನು ಮುಂಗಡವಾಗಿ ತಿಳಿಸಬೇಕು. ಪ್ರಯಾಣ ಸಮಯವನ್ನು ನಿಗದಿಪಡಿಸಲಾದ ಡಿಜಿಟಲ್ ಪ್ರತಿಯ ನಕಲಿಯನ್ನು ಹೊಂದಿರಬೇಕು.
ಟರ್ಮಿನಲ್ -1
ಬೆಳಗ್ಗೆ – ಆರು, ಎಂಟು, ಒಂಬತ್ತು. ರಾತ್ರಿ – ಹನ್ನೊಂದು.
ಮುಂಜಾನೆ 12.00 ಗಂಟೆಗೆ ಮತ್ತು 1.00 ಗಂಟೆಗೆ.
ಟರ್ಮಿನಲ್ -3
ಬೆಳಗ್ಗೆ – 6.15, 8.15, 9.15.
ರಾತ್ರಿ 11.15, 12.15.
ಮುಂಜಾನೆ – 1.15
ರಾಸ್ ಅಲ್ ಖೈಮಾದಲ್ಲಿ ಬಸ್ ನಿಲುಗಡೆ:
ಹಿಲ್ಟನ್ ರಾಸ್ ಅಲ್ ಖೈಮಾ ರೆಸಾರ್ಟ್ ಆ್ಯಂಡ್ ಸ್ಪಾ, ಹಿಲ್ಟನ್ ಗಾರ್ಡನ್ ಇನ್, ಬಿನ್ ಮಾಜಿದ್ ಬೀಚ್ ಹೋಟೆಲ್, ದ ಕೋವ್ ರೊಟಾನ ರೆಸಾರ್ಟ್ , ಜನ್ನ ರೆಸಾರ್ಟ್ ಆ್ಯಂಡ್ ವಿಲ್ಲಾಸ್, ಅಲ್ ಹಂರ ಕನ್ವೆನ್ಷನ್ ಸೆಂಟರ್, ಬಿನ್ ಮಾಜಿದ್ ಬೀಚ್ ರೆಸಾರ್ಟ್, ರಿಕ್ಸಸ್ ಬಾಬ್ ಅಲ್-ಬಹರ್, ಡಬಲ್ ಟ್ರೀ ಬೈ, ಹಿಲ್ಟನ್ ರೆಸಾರ್ಟ್ ಆ್ಯಂಡ್ ಸ್ಪಾ, ಮರ್ಜಾನ್ ಹೈಲ್ಯಾಂಡ್, ಮರ್ಜಾನ್ ಐಲ್ಯಾಂಡ್ ರೆಸಾರ್ಟ್ ಆ್ಯಂಡ್ ಸ್ಪಾ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ