ಅರಂತೋಡು:ಇಲ್ಲಿನ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಸಭಾಭವನ ನಿರ್ಮಾಣಕ್ಕೆ ಆಡಳಿತ ಮಂಡಳಿಯ ನಿರ್ದೇಶಕ ಗಣಪತಿ ಭಟ್ ಗುದ್ದಲಿ ಪೂಜೆಯ ದೀಪ ಬೆಳಗಿಸಿದರು.
ಉಪಾಧ್ಯಕ್ಷ ಶ್ರೀ ಜತ್ತಪ್ಪ ಮಾಸ್ತರ್ ಅಳಿಕೆ ಗುದ್ದಲಿ ಪೂಜೆ ನೆರವೇರಿಸಿದರು.
ಕಾಲೇಜಿನ ಸಂಚಾಲಕರು ಶ್ರೀ ಕೆ ಆರ್ ಗಂಗಾಧರ್, ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ.ಆರ್ ಪದ್ಮನಾಭ ಮತ್ತು ಸದಸ್ಯರಾದ ,ಜನಾರ್ದನ ಅಡ್ಕಬಳೆ, ಅಬ್ದುಲ್ಲಾ ಎ.ಜನಾರ್ದನ ಗೌಡ ದುಗ್ಗಳ,ಎ.ಸಿ.ವಸಂತ, ಪಿ.ಎಂ.ಕೃಷ್ಣಪ್ಪ., ಅಶ್ರಫ್ ಗುಂಡಿ,ಯು.ಎಂ.ಶೇಷಗಿರಿ, ದಯಾನಂದ ಕುರುಂಜಿ, ಗುತ್ತಿಗೆದಾರ ದಿನೇಶ್ ಜೋಡಿಪನೆ,ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ,ಶಿಕ್ಷಕ ಕಿಶೋರ್ ಕುಮಾರ್ ಕಿರ್ಲಾಯ, ಮೋಹನ್ ಚಂದ್ರ, ಮತ್ತು ಕಛೇರಿ ಸಿಬ್ಬಂದಿಗಳಾದ ಧನ್ಯರಾಜ್, ವಿಜಯ್, ಚಂದ್ರ ಶೇಖರ,ಬೃಂದಾ, ಚಿದಾನಂದ ಉಪಸ್ಥಿತರಿದ್ದರು.
ವಿದ್ಯಾಭಿಮಾನಿಗಳು, ಹಿರಿಯ ವಿದ್ಯಾರ್ಥಿಗಳು ಮತ್ತು ಪೋಷಕ ಬಂಧುಗಳು ಸಭಾಂಗಣ ನಿರ್ಮಾಣಕ್ಕೆ ಧನಸಹಾಯ ನೀಡಿ ಸಹಕರಿಸಲು ಆಡಳಿತ ಮಂಡಳಿ ಮನವಿ ಮಾಡಿದೆ.