janadhvani

Kannada Online News Paper

ಬುಖಾರಿ ಎಜುಕೇಶನಲ್, ಚಾರಿಟಿ ಸೆಂಟರ್ ಕಿನ್ಯ- ನಾಳೆ ‘ತಾಜುಲ್ ಫುಖಹಾಅ್ ಮದ್ರಸ’ ಉದ್ಘಾಟನೆ

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ,ಖ್ಯಾತ ವಾಗ್ಮಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಗೈಯ್ಯಲಿರುವರು.

ಕಿನ್ಯಾ:, ಬುಖಾರಿ ಎಜುಕೇಶನಲ್ & ಚಾರಿಟಿ ಸೆಂಟರ್ ಕಿನ್ಯ ಅಧೀನ ಕೂಡಾರ ಗೌಸೀಯ ನಗರದಲ್ಲಿ ನೂತನವಾಗಿ ನಿರ್ಮಿಸಿದ ಮದ್ರಸ ಕಟ್ಟಡದ ಉದ್ಘಾಟನೆಯನ್ನು ನಾಳೆ (28/04/2024, ಆದಿತ್ಯವಾರ) ಬೆಳಿಗ್ಗೆ 8:00 ಕ್ಕೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ನಿರ್ವಹಿಸಲಿದ್ದಾರೆ.

ಸಂಜೆ 5:00 ಕ್ಕೆ ಪೊಸೋಟ್ ಮಳ್ಹರ್ ವಿಧ್ಯಾ ಸಮುಚ್ಚಯದ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ ತಂಙಳ್ ನೇತೃತ್ವದಲ್ಲಿ ನಡೆಯಲಿರುವ ಸುನ್ನೀ ಸಂಗಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಸಯ್ಯಿದ್ ಅಲವಿ ತಂಙಳ್ ದುಆ ನಡೆಸುವರು, ಬುಖಾರಿ ಎಜುಕೇಶನಲ್ ಚಾರಿಟಿ & ಸೆಂಟರ್ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ರವರ ಅಧ್ಯಕ್ಷತೆಯಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ,ಖ್ಯಾತ ವಾಗ್ಮಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಗೈಯ್ಯಲಿರುವರು.

ನೂತನ ಮದ್ರಸವು ಕಿನ್ಯ ದರ್ಸಲ್ಲಿ ಧಾರ್ಮಿಕ ಶಿಕ್ಷಣ ಪಡೆದು ಧಾರ್ಮಿಕ ಕ್ಷೇತ್ರದ ಅತ್ಯುನ್ನತ ಪ್ರತಿಷ್ಠಿತ ಖಾಝಿ ಪದವಿಯನ್ನು ಅಲಂಕರಿಸಿ ನೂರಾರು ವಿದ್ವಾಂಸರನ್ನು ಸಮುದಾಯಕ್ಕೆ ಸಮರ್ಪಿಸಿ ಇತ್ತೀಚೆಗೆ ಅಗಲಿರುವ ಮರ್ಹೂಂ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ರವರ ಸ್ಮರಣಾರ್ಥ ಅವರ ಗೌರವ ನಾಮ ‘ತಾಜುಲ್ ಫುಖಹಾಅ್ ಮದ್ರಸ’ ಕೂಡಾರದಲ್ಲಿ ಕಾರ್ಯಾಚರಿಸಲಿದೆ ಎಂದು ಸೆಂಟರ್ ಪ್ರಧಾನ ಕಾರ್ಯದರ್ಶಿ ಕೆ.ಎಚ್ ಇಸ್ಮಾಈಲ್ ಸಅದಿ ಕಿನ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com