janadhvani

Kannada Online News Paper

ಮುಸ್ಲಿಂ ಐಖ್ಯತಾ ವೇದಿಕೆ ಕುದ್ರೋಳಿ ಇದರ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ಜಂಟಿ ಸಮಾಲೋಚನಾ ಸಭೆ ಶೇಖಡ 100 ಮತದಾನಕ್ಕೆ ಪ್ರತಿಜ್ಞೆ

ಮಂಗಳೂರು ; ದೇಶಾದ್ಯಂತ ಲೋಕಸಭಾ ಚುಣಾವಣೆ ಕಾವೇರುವ ಸಂದರ್ಭ..ಇಡೀ ಭಾರತ ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿ ಗಳಿಂದ ಇಂಡಿಯಾವನ್ನು ರಕ್ಷಿಸಲು ಭಾರತದ ಸಂವಿಧಾನ,ಪ್ರಜಾಪ್ರಭುತ್ವ, ಜಾತ್ಯಾತೀತತೆ ಹಾಗೂ ಸೌಹಾರ್ದ ತೆಯನ್ನು ಉಳಿಸಲು ಪಣತೊಟ್ಟಿರುವ ಸಮಾಜದ ದೊಡ್ಡದೊಂದು ವಿಭಾಗವೇ ಸೆಟೆದು ನಿಂತಿದೆ.
ಈ ಎಲ್ಲಾ ವಿಷಯವಾಗಿ ಜನತೆಯ ಪರವಾಗಿ ನಿಲ್ಲುವ ಒಳ್ಳೆಯ ಅಭ್ಯರ್ಥಿ ಯೊಬ್ಬರನ್ಬು ಗೆಲ್ಲಿಸಿ ಆರಿಸಿ ಕಳುಹಿಸಲು ವಿವಿಧ ಕಾರ್ಯ ಯೋಜನೆಗಳ ಬಗ್ಗೆ ಪ್ರಸ್ತುತ ದೇಶದ ವಿಷಯಗಳ ಬಗ್ಗೆ ಸೇರಿದ ಊರಿನ ಪ್ರತಿನಿಧಿಗಳ ಮುಂದೆ ಇಂಡಿಯಾ ಒಕ್ಕೂಟದ ಸಿಪಿಐಎಂ ರಾಜ್ಯ ನಾಯಕ ಮುನೀರ್ ಕಾಟಿಪಳ್ಳರವರು ವಿವರಿಸಿದರು.

ಹಾಗೂ ಸಿಪಿಐಎಂ ರಾಜ್ಯ ನಾಯಕ ಯಾದವ ಶೆಟ್ಟಿ ಮಾತಾಡಿ ಈಗಿನ ಪರಿಸ್ಥಿತಿ ಬಗ್ಗೆ ವಿವರಿಸಿದರು. ಸಾಮಾಜಿಕ ಕಾರ್ಯಕರ್ತೆ ಮಂಜುಳಾ ನಾಯಕ್ ಮಾತಾಡಿ ಸಭಿಕರನ್ನು ಉರಿದುಂಬಿಸಿದರು. ಕುದ್ರೋಳಿ ವಾರ್ಡ್‌ 100% ಮತದಾನಕ್ಕೆ ಪರಿಶ್ರಮ ಕ್ಕೆ ಎಲ್ಲರೂ ಪ್ರತಿಜ್ಞೆ ಕೈಗೊಂಡರು. ಇಂಡಿಯಾ ಒಕ್ಕೂಟದ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಯವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಲು ನಿರ್ಣಯಿಲಾಯಿತು.

ಮುಸ್ಲಿಂ ಐಖ್ಯತಾ ವೇದಿಕೆ ಅಧ್ಯಕ್ಷರಾದ ಯಾಸೀನ್ ಕುದ್ರೋಳಿ, ಸಂಬ್ರತ್ ಭಟ್, ಕಾರ್ಪೋರೇಟರ್ ಶಂಸುದ್ದೀನ್ ಎಚ್ ಬಿಟಿ, ವೇದಿಕೆ ನಾಯಕರುಗಳಾದ ಮಾಜಿ ಮೇಯರ್ ಕೆ ಅಶ್ರಫ್ ,ಅಝೀಝ್ ಕುದ್ರೋಳಿ, ಮಕ್ಬೂಲ್ ಅಹ್ಮದ್, ಮುಸ್ತಾಕ್, ವಹ್ಹಾಬ್ ಕುದ್ರೋಳಿ, ಬಿ ಎ.ಇಸ್ಮಾಹಿಲ್, ಅಶ್ರಫ್ ಕಿನಾರ, ಅಬ್ದುಲ್ ಲತೀಪ್ ,ಕೆಕೆ ಲತೀಪ್,ಖಲೀಲ್ ಜಾಮಿಅ ,ಎನ್ ಕೆ ಅಬೂಬಕ್ಜರ್, ಮಕ್ಬೂಲ್ ಅಹ್ಮದ್, ಅಶ್ರಫ್ ಮಾಸ್,ಆಸಿಪ್ ,ಟಾಸ್ಕ್ ಪೋರ್ಸ್ ನಾಯಕ ಅಝೀಝ್ ಎಎಟಿ,ಹಾಗೂ ಕುದ್ರೋಳಿ ವಾರ್ಡ್ ಎಲ್ಲಾ ಪ್ರಮುಖರು ಮತ್ತು ಟಾಸ್ಕ್ ಪೋರ್ಸ್ ಟೀಂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಐಖ್ಯತಾ ವೇದಿಕೆ ಪ್ರಧಾನ ಕಾರ್ಯದರ್ಶಿ ಹಾಜಿ ಬಿ ಅಬೂಬಕ್ಕರ್ ಸ್ವಾಗತಿಸಿ ಮಕ್ಬೂಲ್ ವಂದಿಸಿದರು.

error: Content is protected !! Not allowed copy content from janadhvani.com