ಕುವೈತ್ ಸಿಟಿ: ಶೈಖ್ ಅಹ್ಮದ್ ಅಬ್ದುಲ್ಲಾಹ್ ಅಲ್-ಅಹ್ಮದ್ ಅಸ್ವಬಾಹ್ ಅವರನ್ನು ಪ್ರಧಾನ ಮಂತ್ರಿಯಾಗಿ ಕುವೈತ್ ಅಮೀರ್ ಶೈಖ್ ಮಿಶಾಲ್ ಅಹ್ಮದ್ ಜಾಬಿರ್ ಅಲ್-ಸ್ವಬಾಹ್ ನೇಮಕ ಮಾಡಿದ್ದಾರೆ. ಹೊಸ ಸಚಿವ ಸಂಪುಟದ ಸದಸ್ಯರನ್ನು ನಾಮನಿರ್ದೇಶನ ಮಾಡುವ ಜವಾಬ್ದಾರಿಯನ್ನೂ ಅವರಿಗೆ ವಹಿಸಲಾಗಿದೆ.
ಸಂಸತ್ ಚುನಾವಣೆ ಮುಗಿದ ನಂತರ ಕುವೈತ್ ಕ್ಯಾಬಿನೆಟ್ ಏಪ್ರಿಲ್ ಆರಂಭದಲ್ಲಿ ರಾಜೀನಾಮೆ ನೀಡಿತ್ತು. ಪ್ರಧಾನಿ ಡಾ. ಮುಹಮ್ಮದ್ ಸ್ವಬಾಹ್ ಸಲೀಂ ಅಸ್ವಬಾಹ್ ಅವರು ಕುವೈತ್‌ನ ಅಮೀರ್ ಶೈಖ್ ಮಿಶಾಲ್ ಅಹ್ಮದ್ ಜಾಬಿರ್ ಅಲ್-ಸ್ವಬಾಹ್ ಅವರಿಗೆ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು.
ಜನವರಿ 4 ರಂದು ಶೈಖ್ ಡಾ. ಮುಹಮ್ಮದ್ ಸ್ವಬಾಹ್ ಸಲೀಂ ಅಲ್-ಸ್ವಬಾಹ್ ನೇತೃತ್ವದ ಸಚಿವ ಸಂಪುಟ ಅಧಿಕಾರ ವಹಿಸಿಕೊಂಡಿತ್ತು. ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ಸಂಪುಟ ಮುಂದುವರಿಯುತ್ತದೆ.