janadhvani

Kannada Online News Paper

ಮುಂಬೈ : ಬಿಜೆಪಿಯ ಪ್ರಭಾವಿ ನಾಯಕ ಎನ್ಸಿಪಿಯತ್ತ

ಮುಂಬೈ: ಪಶ್ಚಿಮ ಮಹಾರಾಷ್ಟ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧರಾಶೀಲ ಮೋಹಿತೆ ಪಾಟೀಲ್ ಪಕ್ಷ ತೊರೆದು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೇರ್ಪಡೆ ಯಾಗಿದ್ದಾರೆ.

ಮಾಡಾ ಕ್ಷೇತ್ರದಲ್ಲಿ ಅವರು ಅಭ್ಯರ್ಥಿಯಾಗಬಹುದು ಎಂದು ವರದಿಯಾಗಿದೆ . ಇದು ಚುನಾವಣಾ ದೃಷ್ಟಿಯಿಂದ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಮೋಹಿತೆ ಪಾಟೀಲ್ ಅವರು ಈ ಪ್ರದೇಶದ ಪ್ರಭಾವಿ ರಾಜಕೀಯ ಕುಟುಂಬಕ್ಕೆ ಸೇರಿದವರು.

ಮೋಹಿತೆ ಪಾಟೀಲ್ ಕುಟುಂಬವು ಮಾದ ಕ್ಷೇತ್ರ ಒಳಗೊಂಡಿರುವ ಸೋಲಾಪುರ ಜಿಲ್ಲೆಯಲ್ಲಿ 100 ಶಾಲೆಗಳು ಮತ್ತು ಅನೇಕ ವೃತ್ತಿಪರ ಕಾಲೇಜುಗಳನ್ನು ಹೊಂದಿದೆ. 3 ಸಕ್ಕರೆ ಸಹಕಾರ ಸಂಘಗಳು ಇವರ ಕುಟುಂಬದ ನಿಯಂತ್ರಣ ದಲ್ಲಿವೆ. ಧರಾಶೀಲ್ ಅವರ ಚಿಕ್ಕಪ್ಪ ವಿಜಯ್ ಸಿಂಗ್ ಮೋಹಿತೆ ಪಾಟೀಲ್ ಅವರು ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ. ಅವರ ಬೆಂಬಲವೂ ಇದೆ.

ಹಾಲಿ ಸಂಸದ ರಂಜಿತ್ ಸಿಂಗ್ ನಾಯಕ್ ನಿಂಬಾಳ್ಕರ್ ಮಾಡಾ ಬಿಜೆಪಿ ಅಭ್ಯರ್ಥಿ. ಈ ಕ್ಷೇತ್ರವು ಪವಾರ್ ಕುಟುಂಬದ ಸ್ಥಾನವಾದ ಬಾರಾಮತಿಗೆ ಹೊಂದಿಕೊಂಡಿರುವ ಕ್ಷೇತ್ರ ವಾಗಿದೆ .

error: Content is protected !! Not allowed copy content from janadhvani.com