ರಮಲ್ಲಾ: ಪಶ್ಚಿಮ ದಂಡೆಯಲ್ಲಿ ವಸಾಹತುಗಾರರು ನಡೆಸಿದ ಹಿಂಸಾಚಾರದಲ್ಲಿ ಓರ್ವ ಫೇಲೆಸ್ತೀನಿ ಸಾವನ್ನಪ್ಪಿದ್ದಾರೆ. 25 ಮಂದಿ ಗಾಯಗೊಂಡಿದ್ದಾರೆ. ಹಿಂದಿನ ದಿನ ಇಸ್ರೇಲಿ ಪಡೆಗಳಿಂದ ಇಬ್ಬರು ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟ ಸ್ವಲ್ಪ ಸಮಯದ ನಂತರ ವಸಾಹತುಗಾರರು ಅಲ್ಮುಗೈರ್ ಗ್ರಾಮದಲ್ಲಿ ಮನೆಗಳನ್ನು ನಾಶಪಡಿಸಿ ಕಾರುಗಳನ್ನು ಸುಟ್ಟುಹಾಕಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ರಾತ್ರಿ ವೇಳೆಗೆ ಉಗ್ರಗಾಮಿ ಸಂಘಟನೆ ಯೆಶ್ ದಿನ್ ಸದಸ್ಯರು ಗ್ರಾಮಕ್ಕೆ ನುಗ್ಗಿದ್ದರು. ಕಳೆದ ದಿನ ಈ ಪ್ರದೇಶದಲ್ಲಿ ವಲಸೆ ಕುಟುಂಬದ 14 ವರ್ಷದ ಯುವಕ ನಾಪತ್ತೆಯಾಗಿದ್ದ. ಬಾಲಕನ ಹುಡುಕಾಟದ ಹೆಸರಲ್ಲಿ ಹಿಂಸಾಚಾರ ನಡೆದಿದೆ.
ಪಶ್ಚಿಮ ದಂಡೆಯಲ್ಲಿ ಫೇಲೆಸ್ತೀನಿ ಯರ ವಿರುದ್ಧ ವಸಾಹತುಗಾರರ ಇತ್ತೀಚಿನ ಆಕ್ರಮಣಗಳು ಎಲ್ಲಾ ಮಿತಿಗಳನ್ನು ಉಲ್ಲಂಘಿಸಿವೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸುತ್ತಿರುವ ಮಧ್ಯೆ ನಂತರ ಅಲ್ಮುಗೈರ್ ಗ್ರಾಮ ಕ್ಕೆ ಬೆಂಕಿ ಹಚ್ಚಲಾಗಿದೆ.