janadhvani

Kannada Online News Paper

ಲಿವ್ ಇನ್ ರಿಲೇಷನ್ ಜೋಡಿ ಯೂಟ್ಯೂಬರ್ ಆತ್ಮಹತ್ಯೆ

ಚಂಡೀಗಢ: ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಯೂಟ್ಯೂಬರ್ ಗಳು ಹರಿಯಾಣದ ಬಹದ್ದೂರ್ ಗಢದಲ್ಲಿ ತಮ್ಮ ಅಪಾರ್ಟ್ ಮೆಂಟ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಮೃತರನ್ನು ಗರ್ವಿತ್ (25) ಮತ್ತು ನಂದಿನಿ (22) ಎಂದು ಗುರುತಿಸಲಾಗಿದೆ. ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರೂ ಶಾಟ್ ಫಿಲಂ ಚಿತ್ರೀಕರಣ ಮುಗಿಸಿ ಡೆಹ್ರಾಡೂನ್‌ನಿಂದ ಹಿಂತಿರುಗಿದ್ದರು. ವಾಪಸಾದ ಬಳಿಕ ಇಬ್ಬರೂ ವಾಗ್ವಾದಕ್ಕಿಳಿದು ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !! Not allowed copy content from janadhvani.com