ಹಾರ್ದಿಕ್ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಅವರ ವ್ಯವಹಾರ ದಿಂದ 4.3 ಕೋಟಿ ರೂಪಾಯಿಗಳನ್ನು ಕಬಳಿಸಿದ ಆರೋಪದ ಮೇಲೆ ವೈಭವ್ ಅವರನ್ನು ಬಂಧಿಸಲಾಗಿದೆ.
ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ಮಲ ಸಹೋದರ ವೈಭವ್ ಪಾಂಡ್ಯ ಹಣಕಾಸು ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ.
ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧಗಳ ತನಿಖಾ ವಿಭಾಗವು ಬಂಧನವನ್ನು ದೃಢ ಪಡಿಸಿದೆ . ಹಾರ್ದಿಕ್ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಅವರ ವ್ಯವಹಾರಕ್ಕೆ ಸಂಬಂಧ ಪಟ್ಟು ಹಣ ದುರುಪಯೋಗ ಮತ್ತು ಪಾಲುದಾರಿಕೆ ಒಪ್ಪಂದದ ಉಲ್ಲಂಘನೆ ಆರೋಪದ ಮೇಲೆ ವೈಭವ್ ಪಾಂಡ್ಯ ಅವರನ್ನು ಬಂಧಿಸಲಾಗಿದೆ.
ಮೂರು ವರ್ಷಗಳ ಹಿಂದೆ ಹಾರ್ದಿಕ್, ಕೃನಾಲ್ ಮತ್ತು ವೈಭವ್ ಪಾಂಡ್ಯ ಪಾಲಿಮರ್ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದರು. ಹಾರ್ಡಿ ಮತ್ತು ಕೃನಾಲ್ ತಲಾ ಶೇಕಡ 40 ಮತ್ತು ವೈಭವ್ ಶೇಕಡ 20 ರಷ್ಟು ಹಂಚಿಕೊಳ್ಳುವ ಒಪ್ಪಂದದ ಅಡಿಯಲ್ಲಿ ಹೂಡಿಕೆ ಮಾಡಲಾಗಿದೆ. ಇದಲ್ಲದೇ ಸಂಸ್ಥೆಯ ವ್ಯವಹಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನೂ ವೈಭವ್ ಅವರಿಗೆ ನೀಡಲಾಗಿತ್ತು.
ಹೂಡಿಕೆಯ ಆಧಾರದ ಮೇಲೆ ಲಾಭಾಂಶವನ್ನು ವಿತರಿಸುವುದಾಗಿ ಅವರ ನಡುವಿನ ಒಪ್ಪಂದವಾಗಿತ್ತು. ಆದರೆ ವೈಭವ್ ಹಾರ್ದಿಕ್ ಮತ್ತು ಕೃನಾಲ್ ಗೆ ತಿಳಿಸದೆ ಮತ್ತೊಂದು ಪಾಲಿಮರ್ ದಂಧೆ ಆರಂಭಿಸಿದ. ಇದು ಇಬ್ಬರ ಜೊತೆಗಿನ ಪಾಲುದಾರಿಕೆ ಒಪ್ಪಂದವನ್ನು ಉಲ್ಲಂಘಿಸುತ್ತದೆ. ಹೊಸ ಪಾಲಿಮರ್ ವ್ಯಾಪಾರ ಪ್ರಾರಂಭವಾದಾಗ, ಮೊದಲ ಸಂಸ್ಥೆಯಿಂದ ಲಾಭವು ತೀವ್ರವಾಗಿ ಕುಸಿಯಿತು. 3 ಕೋಟಿ ನಷ್ಟವಾಗಿದೆ.
ಇದಲ್ಲದೆ, ವೈಭವ್ ಅವರು ಹಾರ್ದಿಕ್ ಮತ್ತು ಕೃನಾಲ್ ಅವರ ಒಪ್ಪಿಗೆಯಿಲ್ಲದೆ ಜಂಟಿ ಉದ್ಯಮದಲ್ಲಿ ಹೂಡಿಕೆಯನ್ನು ಶೇಕಡಾ 33.3 ಕ್ಕೆ ಹೆಚ್ಚಿಸಿದರು.
ನಂತರ ಪಾಲುದಾರಿಕೆ ಒಪ್ಪಂದದ ಉಲ್ಲಂಘನೆಗಾಗಿ ವೈಭವ್ ವಿರುದ್ಧ ದೂರು ದಾಖಲಾಗಿತ್ತು. ಏತನ್ಮಧ್ಯೆ, ಘಟನೆಯ ಬಗ್ಗೆ ಪಾಂಡ್ಯ ಸಹೋದರರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.