ಮಂಗಳೂರು : ಮುಸ್ಲಿಂ ಸಮುದಾಯದ ಪವಿತ್ರ ರಂಝಾನ್ ತಿಂಗಳು ಮುಗಿದು ದಿನಾಂಕ ಎಪ್ರಿಲ್ 9ರ ರಾತ್ರಿ ಚಂದ್ರ ದರ್ಶನ ವಾದ್ದರಿಂದ ಜಿಲ್ಲೆಯ ಎಲ್ಲಾ ಖಾಝಿಗಳು ಎಪ್ರಿಲ್ 10 ಬುಧವಾರ ಈದ್ ಹಬ್ಬ ಆಚರಿಸಲು ತೀರ್ಮಾನಿಸಿರುತ್ತಾರೆ.
ಆದರೆ ಸರಕಾರಿ ರಜೆ ಎಪ್ರಿಲ್ 11 ಕ್ಕೆ ಇದೆ. ಇದು ಸಾರ್ವಜನಿಕರಿಗೆ ,ಸರಕಾರಿ ನೌಕರರಿಗೆ ಸ್ಕೂಲ್ ಕಾಲೇಜುಗಳಿಗೆ ತೊಂದರೆ ಉಂಟು ಮಾಡುವ ಕಾರಣ ಎಪ್ರಿಲ್ 11 ರ ರಜೆಯನ್ನು ಎಪ್ರಿಲ್ 10 ಕ್ಕೆ ಮಾರ್ಪಾಡಿಸಿ ತೀರ್ಮಾನಿಸಲು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿ ಖಾಝಿಗಳಾದ ಸಯ್ಯಿದ್ ಕೂರತ್ ತಂಙಳ್ , ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರ ತೀರ್ಮಾನವನ್ನು ತಿಳಿಸಲಾಯಿತು ಎಂದು ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಕಿನಾರ ಮಂಗಳೂರು ಪತ್ರಿಕಾ ಪ್ರಕಟಣನೆಯಲ್ಲಿ ತಿಳಿಸಿದ್ದಾರೆ.