janadhvani

Kannada Online News Paper

ರಾಜ್ಯದ ಮುಸ್ಲಿಮರ ರಾಜಕೀಯ ಅವಸ್ಥೆ ಶೋಚನೀಯವಾಗಿದೆ ಫೈರೋಜ್ ರಜ್ವಿ

ರಾಜ್ಯದಲ್ಲಿ ಮುಸ್ಲಿಂ ರಾಜಕೀಯ ನಾಯಕರ ಕೊರತೆ ಇದ್ದು ಈ ದುರ್ಬಲತೆಗೆ ವಿಷಾದವನ್ನು ವ್ಯಕ್ತಪಡಿಸಿ ಮುಸ್ಲಿಮರು ಎಲ್ಲ ರಂಗದಲ್ಲೂ ಶೈಕ್ಷಣಿಕವಾಗಿ, ರಾಜಕೀಯವಾಗಿ ಬಹಳ ಹಿಂದುಳಿದಿದ್ದಾರೆ ಈ ಹಿಂದೆ ಲೋಕಸಭೆ ಮತ್ತು ರಾಜ್ಯಸಭೆ ಯಲ್ಲಿ ಅನೇಕ ಮುಸ್ಲಿಂ ನಾಯಕರು ಸೇವೆ ಸಲ್ಲಿಸಿದ್ದು ರಾಜಕೀಯದಲ್ಲಿ ಮುತವರ್ಜಿಯನ್ನು ವಹಿಸಿದ್ದರ ಕಾರಣ ಅಂದು ವಿಧಾನಸಭೆಯಿಂದ ಸಂಸತ್ ಭವನದಲ್ಲೂ ಸಹ ಮುಸ್ಲಿಮರ ಪರ ಧ್ವನಿ ಗೋಚರಿಸುತ್ತಿತ್ತು ಇಂದಿನ ಬೆಳವಣಿಗೆಯಲ್ಲಿ ಇದೀಗ ಬೆರಳೆಣಕೆಯಷ್ಟು ಮುಸ್ಲಿಂ ನಾಯಕರು ಇದ್ದು ಸಮುದಾಯದಲ್ಲಿ ರಾಜಕೀಯ ನಾಯಕರ ಕೊರತೆ ಉಂಟಾಗಿರುತ್ತದೆ ಇದಕ್ಕೆ ನಮ್ಮಲ್ಲಿನ ವೈಯುಕ್ತಿಕ ದ್ವೇಷಗಳು ಕಾರಣವಾಗಿದೆ ಎಂದು ಮುಸ್ಲಿಂ ಸಾಮಾಜಿಕ ಚಿಂತಕ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ವಿಷಾದ ವ್ಯಕ್ತಪಡಿಸಿದರು.

ಹಾಗು ಇಂದಿನ ರಾಜಕೀಯ ಬೆಳವಣಿಗೆಯಲ್ಲಿ ಗ್ರಾಮ ಪಂಚಾಯತಿ ಇಂದ ಹಿಡಿದು ಲೋಕಸಭೆ, ಮತ್ತು ರಾಜ್ಯಸಭೆ ವರೆಗೂ ಮುಸ್ಲಿಮರ ರಾಜಕೀಯ ಪ್ರವೇಶ ಅತ್ಯವಶ್ಯಕ ಮುಸ್ಲಿಂ ಪ್ರಾಮಾಣಿಕ ನಾಯಕರನ್ನು ಗುರುತಿಸಿ ಸಮುದಾಯದವರ ಹಿತದೃಷಿಯನ್ನು ಕಾಪಾಡಲು ಸಾಂವಿಧಾನಿಕ ವಾಗಿ ಮುಸ್ಲಿಮರ ಎಳಿಗೆಗಾಗಿ ರಾಜಕೀಯ ಪ್ರವೃತ್ತಿಯನ್ನು ಬಲಿಷ್ಟ ಗೊಳಿಸಲು ಮತ್ತು ಸದೃಢಗೊಳಿಸಲು ಪ್ರತಿಯೊಂದು ಸಂಘಸಂಸ್ಥೆಗಳು ಮುಂದಾಗಬೇಕೆಂದು ಕರೆ ನೀಡಿದರು.

ರಾಜ್ಯದಲ್ಲಿ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಮುಸ್ಲಿಮರು ಜಾತ್ಯತೀತ ಸರ್ಕಾರ ರಚಿಸಲು ಹಗಲಿರುಳು ಶ್ರಮಿಸಿದ ಪ್ರತಿಫಲ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸಲು ಕಾರಣವಾಗಿದೆ ಆದಾಗ್ಯೂ ಪಕ್ಷದ ನಿಷ್ಠಾವಂತ ಮುಸ್ಲಿಂ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ಕಲ್ಪಿಸದೆ ಕಡೆಗಣಿಸಿ ಸಮುದಾಯದಲ್ಲಿ ಗೊಂದಲದ ವಾತವರಣ ಸೃಷ್ಟಿಯಾಗಿದೆ ಮಾನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಕಾಂಗ್ರೆಸ್ ನಾಯಕರ ಸಮಾವೇಶದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಕಾರ್ಯಕರ್ತರು ಸಭೆಯನ್ನು ಬಹಿಷ್ಕರಿಸುವುದು ಚುನಾವಣಾ ಸಮಯದಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ.

ಮಾರ್ಚ್ 26 ರಂದು ಗುರು ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಸೂಫಿ ಸಂತರ ಸಂಪ್ರದಾಯದಂತೆ ಉರುಸ್ ಆಚರಣೆ ಕೈಗೊಳ್ಳಲು ಸರ್ಕಾರ ಮತ್ತು ಜಿಲ್ಲಾಡಳಿತ ವಿಫಲವಾಗಿರುವುದು ವಿಪರ್ಯಾಸ ಕಾಂಗ್ರೆಸ್ ಪಕ್ಷವು ದಶಕಗಳಿಂದ ಮುಸ್ಲಿಂ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತರನ್ನು ಕಡೆಗಣಿಸಿ ಕೇವಲ ರಾಜಕೀಯ ಮತ್ತು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ನಮ್ಮ ಜಿಲ್ಲೆಯಲ್ಲೂ ಸಹ ಹಿರಿಯ ಕಾರ್ಯಕರ್ತರನ್ನು ಸರ್ಕಾರದ ನಿಗಮ ಮಂಡಳಿಗಳಲ್ಲಿ ಪ್ರಮುಖ ಸ್ಥಾನಮಾನ ಕಲ್ಪಿಸಿ ಪ್ರೋತ್ಸಾಹಿಸಲು ಪಕ್ಷದ ಉನ್ನತ ನಾಯಕರು ಮುಂದಾಗುವ ಅವಶ್ಯಕತೆ ಮುಖ್ಯ ತಕ್ಷಣಕ್ಕೆ ಪಕ್ಷದಲ್ಲಿನ ಆಂತರಿಕ ಕಲಹಗಳನ್ನು ಬದಿಗಿಟ್ಟು ಪಕ್ಷಕ್ಕೆ ದುಡಿಯುತ್ತಿರುವ ಮುಸ್ಲಿಂ ಕಾರ್ಯಕರ್ತರಿಗೆ ಮನವೊಲಿಸುವ ಕೆಲಸವನ್ನು ಕೈಗೊಂಡಲ್ಲಿ ಲೋಕಸಭೆ ಚುನಾವಣೆ ಎದುರಿಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com