janadhvani

Kannada Online News Paper

ಕೆಸಿಎಫ್ ಕುವೈಟ್ :Enlight ಸೆಕ್ಟರ್ Conference ಹಾಗೂ ಬೃಹತ್ ಇಫ್ತಾರ್ ಸಂಗಮ

ಕುವೈತ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ಮಹಬುಲ ಸೆಕ್ಟರ್ ವತಿಯಿಂದ ಮಹ್ಲರತುಲ್ ಬದ್ರಿಯ ಸ್ವಲಾತ್ ಮಜ್ಲಿಸ್, ಬದರ್ ಮೌಲೂದ್ ಪಾರಾಯಣ, Enlight ಸೆಕ್ಟರ್ Conference ಹಾಗು ಬೃಹತ್ ಇಫ್ತಾರ್ ಸಂಗಮ – 2024 ಕಾರ್ಯಕ್ರಮ ಮಾ.29 ಶುಕ್ರವಾರ ಅಸರ್ ನಮಾಜಿನ ಬಳಿಕ ನಡೆಯಿತು.

ಮಹಬುಲ ಬ್ಲಾಕ್ 1ರ KPC SAND 6 ಬಿಲ್ಡಿಂಗ್ನಲ್ಲಿ ಜನಾಬ್ ಶಂಸುದ್ದಿನ್ ಕುಂದಾಪುರ ಅವರ ಅಧ್ಯಕ್ಷತೆಯಲ್ಲಿ KCF ಕುವೈಟ್ ರಾಷ್ಟೀಯ ಪ್ರಚಾರ ವಿಭಾಗದ ಅಧ್ಯಕ್ಷರಾದ ಬಹುಮಾನ್ಯ ಶಾಹುಲ್ ಹಮೀದ್ ಸಅದಿ ಝುಹುರಿ ರವರ ದುವಾ ದೊಂದಿಗೆ ಹಾಗು ಮಹಬೂಲ ಸೆಕ್ಟರಿನ ಉಪಾಧ್ಯಕ್ಷರಾದ ಬಹುಮಾನ್ಯ ಸತ್ತಾರ್ ಸಅದಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.

ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ KCF ಕುವೈಟ್ ರಾಷ್ಟೀಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರು, KCF ಕುವೈತ್ ರಾಷ್ಟೀಯ ಪ್ರಧಾನ ಕಾರ್ಯದರ್ಶಿಯಾದ ಬಹು ಯಾಕೂಬ್ ಕಾರ್ಕಳರವರು ಹಾಗು ಬಹುಮಾನ್ಯ ಫಾರೂಕ್ ಸಖಾಫಿ,ಉಸ್ತಾದ್ ಸಾಲ್ಮಿಯ ಸೆಕ್ಟರ್ ಅಧ್ಯಕ್ಷ ಕಾಸಿಂ ಉಸ್ತಾದ್ ಬೆಲ್ಮ ಹಾಗೂ ಕುವೈಟ್ ರಾಷ್ಟ್ರೀಯ ಸಮಿತಿ ಇಹ್ಸಾನ್ ಅಧ್ಯಕ್ಷರು ಆದ ಸೌಕತ್ ಅಲಿ ಶಿರ್ವ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ KCF ಕುವೈತ್ ರಾಷ್ಟೀಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರು ರಮದಾನಿನ ಮಹತ್ವ, ಈವರೆಗಿನ ನಮ್ಮ ಇಬಾದತ್ತಿನ ಅವಲೋಕನ ಹಾಗು ಬಾಕಿವಿರುವ ದಿನಗಳ ಇಬಾದತ್ತಿನ ಕುರಿತು ಸವಿಸ್ತಾರವಾಗಿ ನಮ್ಮನ್ನಗಲಿದ KCF ಜಹರ ಸೆಕ್ಟರ್ ಕಾರ್ಯಕರ್ತರಾಗಿದ್ದ ಮರ್ಹೂಂ ಜಲಾಲ್ ಭಾಯಿಯವರ ಕೊನೆಯ ಕ್ಷಣದ ಪ್ರಸಂಗದೊಂದಿಗೆ ವಿವರಿಸಿದರು ಹಾಗು ಅವರ ಕುಟುಂಬದ ಆರ್ಥಿಕ ಸಾಂತ್ವನಕ್ಕಾಗಿ ಆಗ್ರಹಿಸಿದರು.

ಮಹಬೂಲ ಸೆಕ್ಟರಿನ ಉಪಾಧ್ಯಕ್ಷರಾದ ಬಹುಮಾನ್ಯ ಸತ್ತಾರ್ ಸಅದಿ ಉಸ್ತಾದರು ರಮದಾನಿನಲ್ಲಿನ ಒಳ್ಳೆಯ ಬದಲಾವಣೆಗಳನ್ನು ರಮದಾನಿನ ನಂತರದ ದಿನಗಳಲ್ಲಿ ಅಳವಡಿಸುಕೊಳ್ಳುವುದರ ಕುರಿತು ವಿವರಿಸಿದರು. ಬಹುಮಾನ್ಯ ಫಾರೂಕ್ ಸಖಾಫಿ ಉಸ್ತಾದರು ಮೌಲೂದ್ ಪಾರಾಯಣ ಮಾಡಿದರು ಕಾರ್ಯಕ್ರಮಕ್ಕೆ ಮುಹಿಸುನ್ನ ಸಂಸ್ಥೆಯ ಮುಸ್ತಫಾ ನಹೀಮಿ ಉಸ್ತಾದರು ಪಾಲ್ಗೊಂಡು ದುವಾ ಮಾಡಿದರು.

ಈ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ KCF ಕುವೈತ್ ರಾಷ್ಟೀಯ, ಝೋನ್, ಸೆಕ್ಟರಿನ ನಾಯಕರು ಹಾಗು ಕಾರ್ಯಕರ್ತರಲ್ಲದೆ KPC ಬಿಲ್ಡಿಂಗ್ನ ಅನೇಕ ಸಹೋದರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಕಾರ್ಯಕ್ರಮ್ಮಕ್ಕಾಗಿ ಸ್ಥಳವಕಾಶ ಹಾಗೂ ಇಫ್ತಾರಿನ ವ್ಯವಸ್ಥೆಯನ್ನು ಇಹ್ಸಾನ್ ವಿಭಾಗದ ಕಾರ್ಯದರ್ಶಿ ತೌಫೀಕ್ ಕಾರ್ಕಳರವರ ಸಹಕಾರ ಹಾಗೂ ಸೆಕ್ಟರಿನ ಅನೇಕ ನಾಯಕರ, ಕಾರ್ಯಕರ್ತರ ಸಹಾಯ ಹಾಗು ಸಹಕಾರದಿಂದ ಮಾಡಲಾಯಿತು. ಹಾಗೂ ಕೊನೆಯಲ್ಲಿ ಮೆಹಬುಲ ಸೆಕ್ಟರ್ ಕಾರ್ಯದರ್ಶಿ ಸಮೀರ್ ಕಮಲಾಪುರ ಧನ್ಯವಾದಗೈದು ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಳಿಸಿದರು.

ವರದಿ: ಇಬ್ರಾಹಿಂ ವೇಣೂರು ಪಬ್ಲಿಕೇಶನ್ ವಿಭಾಗ ಕುವೈಟ್

error: Content is protected !! Not allowed copy content from janadhvani.com