janadhvani

Kannada Online News Paper

ಹಜ್ ಋತುಗಳಲ್ಲಿ ತಾತ್ಕಾಲಿಕ ಉದ್ಯೋಗ – 59000 ವಿದೇಶಿಯರಿಗೆ ಕಾಲೋಚಿತ ವೀಸಾ

ರಿಯಾದ್:ಈ ವರ್ಷ ಸೌದಿ ಅರೇಬಿಯಾದಲ್ಲಿ ತಾತ್ಕಾಲಿಕ ಉದ್ಯೋಗಗಳಿಗೆ 59,000 ವಿದೇಶೀಯರನ್ನು ನೇಮಕಾತಿ ಮಾಡಲಾಗುವುದು ಎಂದು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಎನ್ ಜಿ. ಅಹ್ಮದ್ ಅಲ್ ರಹಾಜಿ ತಿಳಿಸಿದರು. ವಿವಿಧ ದೇಶಗಳ ವಿವಿಧ ಉದ್ಯೋಗಿಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು 59,000 ಕಾಲೋಚಿತ ಕೆಲಸದ ವೀಸಾಗಳನ್ನು ನೀಡಬೇಕಾಗುತ್ತದೆ ಎಂದು ಮಕ್ಕಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಚೇರಿಯಲ್ಲಿ ನಡೆದ ಉದ್ಯಮಿಗಳ ಸಭೆಯಲ್ಲಿ ಸಚಿವರು ತಿಳಿಸಿದರು.

ಹಜ್ ಮತ್ತು ಉಮ್ರಾದಂತಹ ವಿಶೇಷ ಋತುಗಳಲ್ಲಿ ಇಂತಹ ನೇಮಕಾತಿಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿವಿಧ ಕೆಲಸಗಳನ್ನು ಮಾಡುತ್ತಿರುವ ಕಂಪನಿಗಳಿಗೆ ತಾತ್ಕಾಲಿಕ ಆಧಾರದ ಮೇಲೆ ಕಾರ್ಮಿಕರ ಅಗತ್ಯವಿರುತ್ತದೆ. ಸ್ವದೇಶದಿಂದ ಲಭ್ಯವಿಲ್ಲದ ಸಂಧರ್ಬದಲ್ಲಿ ಹೊರ ದೇಶಗಳನ್ನೇ ಅವಲಂಬಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಾಲೋಚಿತ ವೀಸಾಗಳು ಕಂಪನಿಗಳಿಗೆ ತಮ್ಮ ಕೆಲಸವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ ಎಂದು ಸಚಿವರು ವಿವರಿಸಿದರು.

ಹೀಗಾಗಿ, ಕಾಲೋಚಿತ ವೀಸಾಗಳಲ್ಲಿ ವಿದೇಶಿಯರನ್ನು ನೇಮಿಸಿಕೊಳ್ಳುವಾಗ, ಅವರು ತಮ್ಮ ಕೆಲಸವನ್ನು ಮಾಡಲು ಸಮರ್ಥರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ಕಾಲೋಚಿತ ಕೆಲಸದ ವೀಸಾದಲ್ಲಿ ಬರುವವರಿಗೆ ಹಜ್ ಮಾಡಲು ಅನುಮತಿಸಲಾಗುವುದಿಲ್ಲ ಎಂಬುದನ್ನು ಗಮನಿಸಬೇಕಾಗಿದೆ.ಹಜ್ ಯಾತ್ರೆಗೆ ಅನುಮತಿ ನೀಡಿದರೆ ಅದು ಗಂಭೀರ ಕಾನೂನು ಉಲ್ಲಂಘನೆಯಾಗುತ್ತದೆ.

error: Content is protected !! Not allowed copy content from janadhvani.com