janadhvani

Kannada Online News Paper

ತುಮಕೂರು ಕೊಲೆ ಇದಕ್ಕಿಂತ ಮುಂಚೆ ಆ ಹೊಲದಲ್ಲಿ ಎಷ್ಟು ಶವಗಳನ್ನು ಎಸೆಯಲಾಗಿದೆ ಎಂದು ಸರಕಾರ ತನಿಖೆ ನಡೆಸಬೇಕು

ಮಂಗಳೂರು : ಇತ್ತೀಚೆಗೆ ತುಮಕೂರಲ್ಲಿ ಅತೀ ಕ್ರೂರವಾಗಿ ಕೊಲೆಯಾದವರ ಮನೆಗೆ ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿ ಅಧ್ಯಕ್ಷ ಬಿಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಭೇಟಿ ನೀಡಿದ್ದರು. ಕುಟುಂಬದವರೊಂದಿಗೆ ಚರ್ಚಿಸಿದ ಅಧ್ಯಕ್ಷರು ನಡೆದ ಘಟನೆಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡರು ಈ ಘಟನೆಯಿಂದ ಮೂವರು ಕೂಡ ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡಿದ್ದು ಮುಂದಕ್ಕೆ ಇವರ ಮನೆಗಳು ಕಟ್ಟುವ ಸಂದರ್ಭದಲ್ಲಿ ನಮ್ಮಿಂದಾಗುವ ಸಹಾಯ ಸಹಕಾರಗಳನ್ನು ನೀಡುವುದಾಗಿ ಅಧ್ಯಕ್ಷರು ಕುಟುಂಬದವರೊಂದಿಗೆ ತಿಳಿಸಿದರು.

ನಂತರ ಅಲ್ಲಿ ಸಿಕ್ಕಿದ ಕೆಲವು ಮಾಹಿತಿಗಳ ಪ್ರಕಾರ ಈ ಮೊದಲು ಕೂಡ ಹಲವಾರು ಜನರನ್ನು ಇದೇ ರೀತಿ ಕರೆಸಿ, ಹಲವರಿಗೆ ಪಂಗನಾಮ ಹಾಕಿದ ವಿಷಯಗಳು ಒಂದೊಂದಾಗಿ ಹೊರಬರುತ್ತಿರುವುದನ್ನು ಅಲ್ಲಿ ಜನರು ಹೇಳಿಕೊಳ್ಳುತ್ತಿದ್ದರು. ಅಲ್ಲದೆ ಆ ಒಂದು ಪ್ರದೇಶದಲ್ಲಿ ಇರುವ ಹೊಲದಲ್ಲಿ ಹಲವರನ್ನು ಇದೇ ರೀತಿ ಕರೆಸಿ ಕೊಲೆ ಮಾಡಿ ಹೊಲಕ್ಕೆ ಎಸೆಯಲಾಗಿದೆ ಎಂಬ ಮಾಹಿತಿ ಕೂಡ ಅಲ್ಲಿ ಕೇಳಿಸುತ್ತಿತ್ತು ಇವೆಲ್ಲ ಘಟನೆಗಳನ್ನು ಮನವರಿಕೆ ಮಾಡಿಕೊಂಡ ಅಧ್ಯಕ್ಷರು ಸರಕಾರಕ್ಕೆ ಈ ಒಂದು ಹೇಳಿಕೆಯ ಮೂಲಕ ಹಲವಾರು ಜನರನ್ನು ಆಮಿಷಕ್ಕೆ ಒಳಪಡಿಸಿ ಅವರಿಂದ ದುಡ್ಡುಗಳನ್ನು ಕಸಿದು ಅವರ ಜೀವಗಳನ್ನು ಬಳಿ ಪಡೆದುಕೊಳ್ಳುವ ಇಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸರಕಾರಕ್ಕೆ ಒತ್ತಾಯಿಸುತ್ತಾ ಈ ಒಂದು ಗ್ಯಾಂಗಿನ ಹಿಂದಿರುವ ಎಲ್ಲಾ ವಿಷಯಗಳನ್ನು ಸರಕಾರ ತನಿಖೆಗೊಳಪಡಿಸಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸದಸ್ಯರಾದ ಅಶ್ರಫ್ ಕಿನಾರ ಮಂಗಳೂರು ,ಸಿದ್ದಿಖ್ ಕಾಜೂರು , ಬಿಕೆ ಹಿದಾಯ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com