ಬೆಂಗಳೂರು: ಮಾರ್ಚ್ 31 ಆದಿತ್ಯವಾರ ಖುದ್ದೂಸ್ ಸಾಹೆಬ್ ಈದ್ಗಾ ಮೈದಾನದಲ್ಲಿ ನಡೆಯುವ ಬೆಂಗಳೂರಿನ ಅತೀ ದೊಡ್ದ ಆಧ್ಯಾತ್ಮಿಕ ಮಜ್ಲಿಸ್ ಗ್ರಾಂಡ್ ರೂಹಾನಿ ಇಜ್ತಿಮಾ ಕಾರ್ಯಕ್ರಮದಲ್ಲಿ ಆರು ದಶಕಗಳ ಕಾಲ ಸುನ್ನೀ ಸಮೂಹಕ್ಕೆ ಅಜೇಯ ಸಾರಥ್ಯ ನೀಡಿದ ಅಮೀನುಶ್ಶರೀಅ ಅಲೀ ಬಾಫಖಿ ತಂಗಳರನ್ನು ಬೆಂಗಳೂರಿನ ಸುನ್ನೀ ಸಮೂಹ ಸನ್ಮಾನಿಸಲಿರುವುದು.
ಸಂಜೆ ನಾಲ್ಕು ಗಂಟೆಗೆ ಫ್ಯಾಮಿಲಿ ಮೀಟ್ ನೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು,ಗ್ರಾಂಡ್ ಇಫ್ತಾರ್,ದಿಕ್ರ್ ದುಆ,ಮಜ್ಲಿಸ್ನಲ್ಲಿ ಭಾರತದ ವಿವಿಧ ಕಡೆಯಿಂದ ಆಧ್ಯಾತ್ಮಿಕ ವಿದ್ವಾಂಸರು, ಉಲಾಮಾ ಉಮಾರಾ ನೇತಾರರು ಭಾಗವಹಿಸಲಿರುವರು. ಹತ್ತು ಸಾವಿರಕ್ಕೂ ಮಿಕ್ಕ ಜನರು ಸೇರುವ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ದತೆಗಳು ಈಗಾಗಲೇ ಪೂರ್ತಿಯಾಗಿದೆ.