janadhvani

Kannada Online News Paper

ಇರಾಕಿನಲ್ಲಿ ಶೀಘ್ರದಲ್ಲೇ ಹೊಸ ಸರ್ಕಾರವು ಅಸ್ತಿತ್ವಕ್ಕೆ ಬರಲಿದೆ

ಕುವೈಟ್ ಸಿಟಿ: ಇರಾಕಿನಲ್ಲಿ ಹೊಸ ಸರ್ಕಾರವು ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ ಎನ್ನುವ ನಿರೀಕ್ಷೆಯಿದೆ ಎಂದು ಕುವೈತ್ ‌ನ ವಿದೇಶಾಂಗ ಸಹ ಸಚಿವ ಖಾಲಿದ್ ಅಲ್ ಜಾರಲ್ಲಾ ಹೇಳಿದ್ದಾರೆ.
ಇರಾಕ್‌ನ ಸದರಿಸ್ಟ್ ಮೂವ್ಮೆಂಟ್ ನಾಯಕ ಸಯ್ಯಿದ್ ಮುಖ್ತದಾ ಅಲ್ ಸದರ್ ಅವರ ಗೌರವಾರ್ಥ ಕುವೈತ್ ವಿದೇಶಿ ಸಚಿವಾಲಯ ಸಿದ್ಧಪಡಿಸಿದ ಗಬ್ಕಾದಲ್ಲಿ ಅವರು ಭಾಷಣ ಮಾಡುತ್ತಿದ್ದರು.

ಇರಾಕಿನ ಚುನಾವಣಾ ಫಲಿತಾಂಶಗಳು ಪೂರ್ಣಗೊಂಡ ಬಳಿಕ ಮುಖ್ತದಾ ಕುವೈತ್ ಗೆ ಆಗಮಿಸಿದ್ದರು. ಅಮಿರ್ ಶೈಖ್ ಸಬಾಹ್ ಅಲ್ ಅಹ್ಮದ್ ಅಲ್ ಜಾಬರ್ ಅಲ್ ಸಬಾಹ್‌ರ ಆಹ್ವಾನಪ್ರಕಾರ ಈ ಭೇಟಿ ನಡೆದಿತ್ತು. ಇರಾಕಿನಲ್ಲಿ ರಚನೆಗೊಳ್ಳುವ ಸರ್ಕಾರದ ಬಗ್ಗೆ ಮುಖ್ತದಾ ಕುವೈತ್ ಅಮಿರ್ ಅವರಿಗೆ ವಿವರಿಸಿರುವುದಾಗಿ ಸದರ್ ಮೂವ್ಮೆಂಟ್ ತನ್ನ ಪತ್ರಿಕಾ ಹೇಳಿಕೆ ತಿಳಿಸಿದೆ.

ದೇಶದ ಎಲ್ಲಾ ವಿಭಾಗಗಳ ಹಕ್ಕುಗಳನ್ನು ಸಂರಕ್ಷಿಸುವ ಆಡಳಿತ ವ್ಯವಸ್ಥೆಯನ್ನು ರಚನೆಗೊಳ್ಳುವ ಸರಕಾರದಲ್ಲಿ ನಿರೀಕ್ಷಿಸಬಹುದು ಎಂದು ಮುಖ್ತದಾ ಹೇಳಿದರು. ಮುಖ್ತದಾ ಅಲ್ ಸದರ್ ಅವರ ನೇತೃತ್ವದ ಪಕ್ಷಕ್ಕೆ ಇರಾಕ್ ಪಾರ್ಲಿಮೆಂಟಿನ ಚುನಾವಣೆಯಲ್ಲಿ 54 ಸೀಟುಗಳು ದೊರೆತಿದೆ. ಅಲ್ ಹಶದ್ ಅಲ್ ಶಹಬಿ ನೇತೃತ್ವದ ರಂಗಕ್ಕೆ 47 ಸೀಟ್ ಗಳಿವೆ.
ಪ್ರಧಾನ ಮಂತ್ರಿ ಹೈದರ್ ಅಲ್ ಅಬಾದಿ ಅವರ ಪಕ್ಷ 42 ಸೀಟುಗಳನ್ನು ಹೊಂದಿದೆ.

error: Content is protected !! Not allowed copy content from janadhvani.com