ರೈಕಾಜ್ವಿಕ್: ಐಸ್ಲೆಂಡಿನ ಮುಸ್ಲಿಮರು ದಿನಕ್ಕೆ 20 ಗಂಟೆಗಳಿಗೂ ಹೆಚ್ಚಿನ ಸಮಯ ರಂಝಾನ್ ಉಪವಾಸ ಆಚರಿಸುತ್ತಿದ್ದಾರೆ.ಇದು ವಿಶ್ವದ ಅತ್ಯಂತ ದೀರ್ಘವಾದ ರಂಝಾನ್ ಉಪವಾಸವಾಗಿದೆ.
ಐಸ್ಲ್ಯಾಂಡ್‌ನ ಹಗಲುಗಳು ದೀರ್ಘವಾಗಿರುವ ಕಾರಣ ಇದು ಸಂಭವಿಸುತ್ತದೆ. ರಾತ್ರಿ 11 ಗಂಟೆಗೆ ಸೂರ್ಯಾಸ್ತಮವಾಗುತ್ತದೆ.ಬೆಳಿಗ್ಗೆ 4 ಕ್ಕೆ ಸೂರ್ಯ ಉದಯವಾಗುತ್ತದೆ.
ರಂಝಾನ್ ಉಪವಾಸವನ್ನು ಆಚರಿಸುವ ಮುಸ್ಲಿಮರಿಗೆ ಕೇವಲ ಎರಡು ಗಂಟೆಗಳು ಮಾತ್ರ ತಿನ್ನಲು ಮತ್ತು ಕುಡಿಯಲು ಸಾಧ್ಯವಿದೆ.ಆದರೆ ಅದು ನಂಬಿಕೆಯ ಭಾಗವಾಗಿರುವುದರಿಂದ, ತುಂಬಾ ಸುಲಭ ಎಂದು ಅಲ್ಲಿನ ಮುಸ್ಲಿಮರು ಹೇಳುತ್ತಾರೆ.
ಐದು ವರ್ಷಗಳ ಹಿಂದೆ ಪಾಕಿಸ್ತಾನದಿಂದ ಐಸ್ಲ್ಯಾಂಡ್ ಗೆ ತೆರಳಿದ ಸಲ್ಮಾನ್, ದಿನಕ್ಕೆ 22 ಗಂಟೆಗಳ ಉಪವಾಸ ಆಚರಿಸಿರುವುದಾಗಿ ಹೇಳುತ್ತಾರೆ.