janadhvani

Kannada Online News Paper

ದಮ್ಮಾಮ್: ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ KMYA- ಇಫ್ತಾರ್ ಕೂಟ

ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ (ಕೆಎಂವೈಎ) ದಮ್ಮಾಂ ಘಟಕದ ಇಫ್ತಾರ್ ಕೂಟ ಇಂದು 15, ಮಾರ್ಚ್ 2024 ಶುಕ್ರವಾರ ಜುಬೈಲ್ ನಲ್ಲಿ ಜರಗಿತು.
ಅಧ್ಯಕ್ಷ ಮುಸ್ಥಫ ಇಬ್ರಾಹೀಂರವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಪಿ.ಎಂ. ಆರಿಫ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿತು.
ಮಾಷ್ಟರ್ ಸುಲೈಮಾನ್ ಆಹಿದ್ ಬಿನ್ ಶಕೀಲ್ ಖಿರಾಅತ್ ಪಠಿಸಿದರು.

ಉಪಾಧ್ಯಕ್ಷ ಸೈಫುಲ್ಲ ಮುಹ್ಯಿದ್ದೀನ್ ಇಫ್ತಾರ್ ಕೂಟಕ್ಕೆ ಆಗಮಿಸಿದ ಅಲ್ ಹಸ್ಸ, ಜುಬೈಲ್, ಅಲ್ಖೋಬರ್, ದಮ್ಮಾಂ ಘಟಕದ ಸದಸ್ಯರನ್ನು ಸ್ವಾಗತಿಸಿದರು ಹಾಗೂ ಮಹಾಸಭೆಯ ವರದಿಯನ್ನು ವಾಚಿಸಿದರು.
ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳ ರವರು ರಮಳಾನ್ ಸಂದೇಶದಲ್ಲಿ ರಮಳಾನ್ ನಲ್ಲಿ ನಿರ್ವಹಿಸುವ ಇಬಾದತ್, ಕಾರ್ಯ ಪ್ರವರ್ತನೆ ಬಗ್ಗೆ ವಿವರಿಸಿ ಅದಕ್ಕೆ ಅಲ್ಲಾಹನು ನೀಡುವ ಪ್ರತಿಫಲದ ಬಗ್ಗೆ ವಿಶದೀಕರಿಸಿದರು.
ಕೋಶಾಧಿಕಾರಿ ಪಿ.ಎಂ. ತಾಜುದ್ದೀನ್ ಪ್ರವರ್ತನಾ ವರದಿ ಮಂಡಿಸಿದರು.
ಮಾಜಿ ಅಧ್ಯಕ್ಷರುಗಳಾದ ಪಿ.ಎ. ರಹ್ಮಾನ್, ಪಿ.ಎ. ಮುಹಮ್ಮದ್ ಬಶೀರ್, ನಝೀರ್ ಗುಲಾಂ ಹಾಗೂ ಇನ್ನಿತರ ಸದಸ್ಯರು ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿದರು.

error: Content is protected !! Not allowed copy content from janadhvani.com