janadhvani

Kannada Online News Paper

ಡಿ.ಕೆ.ಎಸ್.ಸಿ ಬತ್ತ ಯುನಿಟ್ ವತಿಯಿಂದ ಬೃಹತ್ ಇಫ್ತಾರ್ ಸಂಗಮ

ರಿಯಾದ್: ಡಿ.ಕೆ.ಎಸ್.ಸಿ ಬತ್ತ ಯುನಿಟ್ ವತಿಯಿಂದ ಅಸ್ಮಾಉಲ್ ಹುಸ್ನಃ ಮಜ್ಲಿಸ್ ಹಾಗೂ ಬೃಹತ್ ಇಫ್ತಾರ್ ಸಂಗಮ ದಾವೂದ್ ಕಂದಕ್‌ರವರ ನಿವಾಸದಲ್ಲಿ ನಡೆಯಿತು. ಖಲೀಲ್ ಝುಹ್‌ರಿ ಪಂಜ ಅಸ್ಮಾಉಲ್ ಹುಸ್ನಃ ಮಜ್ಲಿಸಿಗೆ ನೇತೃತ್ವ ನೀಡಿ ಹಿತವಚನ ನೀಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ‌ಡಿ.ಕೆ.ಎಸ್.ಸಿ ರಿಯಾದ್ ಝೋನಲ್ ಗೌರವಾಧ್ಯಕ್ಷರಾದ ಅಝೀಝ್ ಬಜ್ಪೆ ಡಿ.ಕೆ.ಎಸ್.ಸಿ. ವಿಝನ್-30 ಯೋಜನೆ ಬಗ್ಗೆ ಮಾತನಾಡಿ, “ನಮ್ಮ ಸಮುದಾಯದ ಸಬಲೀಕರಣಕ್ಕಾಗಿ ಕಳೆದ 28 ವರ್ಷಗಳಿಂದ ಕೊಲ್ಲಿ ರಾಷ್ಟ್ರಗಳಲ್ಲಿ ಅವಿರತವಾಗಿ ಕಾರ್ಯಾಚರಿಸುತ್ತಿರುವ “ಡಿ.ಕೆ.ಎಸ್.ಸಿ.” ಎಂಬ ಬೃಹತ್ ಸಂಘಟನೆ ಹಾಗೂ ಇದರ ಅಧೀನದಲ್ಲಿ ಅನಾಥ ಹಾಗೂ ನಿರ್ಗತಿಕ ಮಕ್ಕಳ ಸಹಿತ 2500ಕ್ಕೂ ಮಿಕ್ಕ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನೂ, ಬೋಧಕ ಮತ್ತು ಬೋಧಕೇತರರಾದ 225ಕ್ಕೂ ಅಧಿಕ ಮಂದಿಗೆ ಉದ್ಯೋಗ ವನ್ನೂ ಕಲ್ಪಿಸಿರುವ ದಕ್ಷಿಣ ಕರ್ನಾಟಕದ ಜನತೆಗೆ ಚಿರಪರಿಚಿತವಾದ ಬೃಹತ್ ವಿದ್ಯಾಸಂಸ್ಥೆ “ಮರ್ಕಝ್ ತಅ್‌ಲೀಮಿಲ್ ಇಹ್ಸಾನ್“. ಕರಾವಳಿಯ ನಮ್ಮ ಸಮುದಾಯದ ಹೆಚ್ಚಿನ ಶೈಕ್ಷಣಿಕ ಬೇಡಿಕೆಗೆ ಅನುಗುಣವಾಗಿ, ಡಿ.ಕೆ.ಎಸ್.ಸಿ. 30 ಎಕರೆ ಭೂಮಿಯನ್ನು ಖರೀದಿಸಲು ಮುಂದಾಗಿದ್ದು, ಇದು ಡಿ.ಕೆ.ಎಸ್.ಸಿ.ಯ ಎರಡನೇ ಮರ್ಕಝನ್ನಾಗಿ ನಿರ್ಮಿಸಿ ; ಕೆಜಿಯಿಂದ ಪಿಜಿ ವರೆಗೆ ಒಳಗೊಳ್ಳುವ ಹಾಗೂ ಅನಾಥ, ನಿರ್ಗತಿಕ ಮತ್ತು ನಿರಾಶ್ರಿತ ಮಕ್ಕಳಿಗೆ ವಿಶೇಷ ಅವಕಾಶ ಕಲ್ಪಿಸುವ ಸಂಸ್ಥೆಯಾಗಲಿದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿ.ಕೆ.ಎಸ್.ಸಿ ಬತ್ತ ಯುನಿಟ್ ಅಧ್ಯಕ್ಷರಾದ ಕಬೀರ್ ಕಂದಕ್, ಪ್ರಧಾನ ಕಾರ್ಯದರ್ಶಿ ಶಾಫಿ ಕಾನ, ಕೋಶಾಧಿಕಾರಿ ಹುಸೈನ್ ಕೃಷ್ಣಾಪುರ, ರಿಯಾದ್ ಝೋನಲ್ ಅಧ್ಯಕ್ಷರಾದ ಅಝೀಝ್ ಕಾಟಿಪಳ್ಳ, ಪ್ರಧಾನ ಕಾರ್ಯದರ್ಶಿ ಹುಝೈಫ ಪೆರಾಜೆ, ಕೋಶಾಧಿಕಾರಿ ದಾವೂದ್ ಕಂದಕ್, ಸಲಹೆಗಾರರಾದ ಅಬ್ದುರ್ರಹ್ಮಾನ್ ಸುಲೈಮಾನ್ ಉಚ್ಚಿಲ, ಡಿ.ಕೆ.ಎಸ್.ಸಿ. ಹಿರಿಯ ನೇತಾರ ನಝೀರ್ ಹಾಜಿ ಕಾಶಿಪಟ್ನ ಉಪಸ್ಥಿತರಿದ್ದು, ಹಲವಾರು ಮಂದಿ ಡಿ.ಕೆ.ಎಸ್.ಸಿ. ವಿಝನ್ -30 ಯೋಜನೆಯೊಂದಿಗೆ ಕೈ ಜೋಡಿಸಿದರು. ಸೇರಿದ ಎಲ್ಲಾ ಹಿತೈಷಿಗಳಿಗೂ ಏರ್ಪಡಿಸಲಾಗಿದ್ದ ಬೃಹತ ಇಫ್ತಾರ್ ಕೂಟವು ಬಹಳ ವಿಜೃಂಭಣೆಯಿಂದ ನಡೆಯಿತು.

error: Content is protected !! Not allowed copy content from janadhvani.com