ಕಿನ್ಯಾ: ಬುಖಾರಿ ಎಜುಕೇಶನಲ್ & ಚಾರಿಟಿ ಸೆಂಟರ್ ಕಿನ್ಯ ಅಧೀನದ ಕೂಡಾರದಲ್ಲಿ ನಿರ್ಮಾಣವಾದ ಮದ್ರಸ ಕಟ್ಟಡದಲ್ಲಿ ಪವಿತ್ರ ರಮಳಾನ್ ಪ್ರಯುಕ್ತ ಪರಿಸರದ ವಿಶ್ವಾಸಿಗಳಿಗೆ ಆರಾಧನೆಯ ಅಗತ್ಯವನ್ನು ಪರಿಗಣಿಸಿ ನಮಾಝನ್ನು ಆರಂಭಿಸಲಾಯಿತು.
ಬುಖಾರಿ ಎಜುಕೇಶನಲ್ & ಚಾರಿಟಿ ಸೆಂಟರ್ ನಿರ್ದೇಶಕರಾದ ಸಯ್ಯಿದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ ತಂಙಳ್ ಮಳ್ಹರ್ ಸಾಮೂಹಿಕ (ಜಮಾಅತ್) ನಮಾಝಿಗೆ ನೇತೃತ್ವ ನೀಡಿದರು. ಸೆಂಟರ್ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಸದ್ರಿ ಸ್ಥಳದಲ್ಲಿ ನಿರ್ಮಾಣವಾದ ಮದ್ರಸ ಹಾಗೂ ನೂತನವಾಗಿ ಪ್ರಾರಂಭಿಸಿದ ನಮಾಝಿನ ಪ್ರಾಮುಖ್ಯತೆಯನ್ನು ವಿವರಿಸಿ ಮಾತನಾಡಿದರು.
ಬುಖಾರಿ ಎಜುಕೇಶನಲ್ & ಚಾರಿಟಿ ಸೆಂಟರ್ ಕೋಶಾಧಿಕಾರಿ, ಅಶ್ರಫ್ ಸಖಾಫಿ, ಸೆಂಟರ್ ನಾಯಕರಾದ ಕೆ.ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಬುಖಾರಿ ಜುಮುಅ ಮಸ್ಜಿದ್ ಖತೀಬ್ ಅಬೂಬಕರ್ ಸಿದ್ದೀಕ್ ಫಾಳಿಲಿ ಕಾರ್ಯಕ್ರಮಕ್ಕೆ ಶುಭ ಹಾರೈಕೆ ಸಲ್ಲಿಸಿ ಮಾತನಾಡಿದರು. ಸಯ್ಯಿದ್ ಪಝಲ್ ಅಲ್ ಬುಖಾರಿ ತಂಙಳ್, ಮದ್ರಸ ನಿರ್ಮಾಣ ಸಮಿತಿ ಅಧ್ಯಕ್ಷ ಎಲಿಮಲೆ ಅಬ್ಬಾಸ್ ಹಾಜಿ, ಸೆಂಟರ್ ನಾಯಕರಾದ ಇಝ್ಝುದ್ದೀನ್ ಅಹ್ಸನಿ, ವಿ.ಎ ಮುಹಮ್ಮದ್ ಮುಸ್ಲಿಯಾರ್, ಬುಖಾರಿ ಜುಮುಅ ಮಸ್ಜಿದ್ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಹಾಜಿ ನಾಟೆಕಲ್,ಉಪಾಧ್ಯಕ್ಷ ಕೆ.ಎಚ್ ಮೂಸಕುಂಞಿ, ಅಬ್ದುಲ್ ಹಮೀದ್ ಟಿಂಬರ್, ಕಾರ್ಯದರ್ಶಿ ಅಬ್ದುಸ್ಸತ್ತಾರ್ ಮೀಂಪ್ರಿ,ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಅಧ್ಯಕ್ಷ ಇರ್ಫಾನ್ ಸಖಾಫಿ ಖುತುಬಿನಗರ,ಸಿದ್ದೀಖ್ ಕನ್ನಂಗಾರ್, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್ ಮುಂತಾದವರು ಉಪಸ್ಥಿತರಿದ್ದರು,ಸಯ್ಯಿದ್ ಅಲವಿ ತಂಙಳ್ ಕಾರ್ಯಕ್ರಮದ ಪ್ರಾರಂಭದಲ್ಲಿ ದುಆ ಮೂಲಕ ಚಾಲನೆ ನೀಡಿದರು,ಬುಖಾರಿ ಎಜುಕೇಶನಲ್ & ಚಾರಿಟಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಕೆ.ಎಚ್ ಇಸ್ಮಾಈಲ್ ಸಅದಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.