ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಖತಾರ್ ರಾಷ್ಟ್ರೀಯ ಸಮಿತಿಯ ಮಹಾಸಭೆ ದಿನಾಂಕ 8, ಮಾರ್ಚ್ 2024 ಶುಕ್ರವಾರ ಸಂಜೆ 7 ಕ್ಕೆ ಸರಿಯಾಗಿ ಖತಾರ್ ನಲ್ಲಿ ಜರಗಿತು.
ಡಿಕೆಯಸ್ಸಿ ಖತಾರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಸುಲೈಮಾನ್ ಮುಂಡ್ಕೂರು ರವರ ಘನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಸಿಎಫ್ ಐಸಿ ಸಂಘಟನಾ ಕಾರ್ಯದರ್ಶಿ ಹಾಫಿಳ್ ಉಮರುಲ್ ಫಾರೂಖ್ ಸಖಾಫಿ ದುಆ ಗೈದರು.
ಸಭೆಗೆ ಆಗಮಿಸಿದ ಗಣ್ಯರನ್ನು, ಸದಸ್ಯರನ್ನು, ಡಿಕೆಯಸ್ಸಿಯ ಹಿತೈಷಿಗಳನ್ನು ಮರ್ಕಝ್
ತಅಲೀಮಿಲ್ ಇಹ್ಸಾನ್ ಹಳೆ ವಿದ್ಯಾರ್ಥಿ ಹನೀಫ್ ಸಅದಿ ಯವರು ಅಚ್ಚುಕಟ್ಟಾಗಿ ಸ್ವಾಗತಿಸಿದರು.
ಡಿಕೆಯಸ್ಸಿ ಕೇಂದ್ರ ಸಮಿತಿಯ ಉಪಾಧ್ಯಕ್ಷರೂ, ಖತಾರ್ ರಾಷ್ಟ್ರೀಯ ಸಮಿತಿಯ ಉಸ್ತುವಾರಿಗಳೂ ಆದ ಹಾಜಿ ಹಾತಿಂ ಕೂಳೂರು ಅಲ್ಲಾಹನ ಪವಿತ್ರ ನಾಮದಿಂದ ಸಮಾರಂಭವನ್ನು ಉದ್ಘಾಟಿಸಿದರು.
ಮುಖ್ಯ ಭಾಷಣಗಾರರಾಗಿ ಮರ್ಕಝ್ ತಅ್ ಲೀಮಿಲ್ ಇಹ್ಸಾನ್ ಮೂಳೂರು ಇದರ ಮಾಜಿ ಪ್ರಧಾನ ಕಾರ್ಯದರ್ಶಿಯೂ ಮತ್ತು ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ.ಈಸ್ಟ್ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆದ ಅಲ್ ಹಾಜ್ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಪಾಣೆ ಮಂಗಳೂರು ಮುಖ್ಯ ಪ್ರಭಾಷಣಗೈದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಶಾಹಿದ್, ಮಣಿಪುರ ರವರು ವಾರ್ಷಿಕ ವರದಿ ಮತ್ತು ಪ್ರವರ್ತನಾ ವರದಿಯನ್ನು ಮಂಡಿಸಿ ಸಭೆಯ ಅಂಗೀಕಾರ ಪಡೆದರು.
2024-25 ನೇ ಸಾಲಿಗೆ ನೂತನ ಸಮಿತಿಯನ್ನು ಡಿಕೆಯಸ್ಸಿ ಕೇಂದ್ರ ಸಮಿತಿ ಕಾರ್ಯದರ್ಶಿ ಅಬೂಬಕ್ಕರ್ ಬರ್ವರವರ
ನೇತೃತ್ವದಲ್ಲಿ ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ಲ ಉಂಞಿ ಉಚ್ಚಿಲ, ಪ್ರಧಾನ ಕಾರ್ಯದರ್ಶಿಯಾಗಿ ಶವಾಝ್ ಅಹ್ಮದ್ ಚೊಕ್ಕ ಬೆಟ್ಟು, ಕೋಶಾಧಿಕಾರಿಯಾಗಿ ಅಬ್ದುಲ್ ಶಾಹಿದ್ ಮಣಿಪುರ ರವರನ್ನು ನೇಮಕಗೊಳಿಸಲಾಯಿತು.
ಉಪಾಧ್ಯಕ್ಷರಾಗಿ ಉಸ್ತಾದ್ ಇಸ್ಹಾಖ್ ನಿಝಾಮಿ, ಸುಲೈಮಾನ್ ಮುಂಡ್ಕೂರು, ಅಂದುಮಾನ್ ನಾವುಂದ ರವರು ಆಯ್ಕೆಗೊಂಡರು.
ಕಾರ್ಯದರ್ಶಿಗಳಾಗಿ ಅಬ್ದುರ್ರಝ್ಝಾಖ್ ಮುಂಡ್ಕೂರು, ಸದಖತುಲ್ಲಾ ಕೂಳೂರು, ತಬ್ಸೀರ್ ಮನ್ಹರ್ ಪಾಣೀರ್ ರವರನ್ನು ಆರಿಸಲಾಯಿತು.
ಸೂಫಿ ಇಬ್ರಾಹೀಂ ಮತ್ತು ತಾಜುದ್ದೀನ್ ಮೆಲ್ಕಾರ್ ರವರನ್ನು ಸಂವಹನ ಕಾರ್ಯದರ್ಶಿಗಳಾಗಿ, ಹನೀಫ್ ಸಅದಿ ಮತ್ತು ಫಾರೂಖ್ ಕೃಷ್ಣಾಪುರ ರವರನ್ನು ಕನ್ವೀನರ್ ಆಗಿ ನೇಮಕಗೊಂಡರು
ಹಾಗೂ 29 ಸದಸ್ಯರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.
ನೂತನ ಸಮಿತಿಗೆ ಶುಭ ಹಾರೈಕೆಗೈದವರು.:
1.ಫಾರೂಖ್ (ಪ್ರ.ಕಾರ್ಯದರ್ಶಿ ಕೆಸಿಎಫ್ ಖತರ್ ರಾಷ್ಟ್ರೀಯ ಸಮಿತಿ)
2.ಇಸ್ಹಾಖ್ ನಿಝಾಮಿ,ಅಲ್ ಹಿಕಮಿ (ಗೌರವಾಧ್ಯಕ್ಷರು, ಡಿಕೆಯಸ್ಸಿ ಖತರ್ ರಾಷ್ಟ್ರೀಯ ಸಮಿತಿ)
ಸಭೆಯ ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಶವಾಝ್ ಚೊಕ್ಕಬೆಟ್ಟು ಧನ್ಯವಾದಗೈದರು.