ಮಂಗಳೂರು: ಕೊಡುಗೈ ದಾನಿ, ಯುವ ಉದ್ಯಮಿ ಲತೀಫ್ ಗುರುಪುರ ನೇತೃತ್ವದ ಅನಿ ಟ್ರೇಡಿಂಗ್ ಸಮೂಹ ಸಂಸ್ಥೆಯಿಂದ ಸೂರಿಲ್ಲದವರಿಗೊಂದು ಆಸರೆ ಯೋಜನೆಯಡಿಯಲ್ಲಿ ಪ್ರಥಮ ಮನೆಯನ್ನು ಕೀ ಹಸ್ತಾಂತರಿಸುವ ಮೂಲಕ ಉದ್ಘಾಟನೆಗೊಳಿಸಲಾಯಿತು.
ಬಡ ಮತ್ತು ನಿರ್ಗತಿಕ ಕುಟುಂಬಗಳನ್ನು ಆಯ್ಕೆ ಮಾಡಿ ಕಳೆದ ವರ್ಷ 5 ಮನೆ ನಿರ್ಮಿಸುವುದಾಗಿ ತೀರ್ಮಾನಿಸಲಾಗಿದ್ದು, ಇದೀಗ ಎರಡು ಮನೆಗಳು ಪೂರ್ತಿಗೊಂಡಿದ್ದು ಮೊದಲನೆಯ ಮನೆಯನ್ನು ಇಂದು ಇನೋಳಿಯ ಹಸನಬ್ಬ(ಪುತ್ತಾಕ) ಕಡವುರವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ನೇತೃತ್ವವನ್ನು ಮುಹಮ್ಮದ್ ಶಮೀಮ್ ತಂಙಳ್ ಕುಂಬೋಳ್ ವಹಿಸಿದ್ದರು. ಅನಿ ಟ್ರೇಡಿಂಗ್ ಸಂಸ್ಥೆಯ ಸ್ಥಾಪಕ ಮನೆ ನಿರ್ಮಿಸಿಕೊಟ್ಟ ಲತೀಫ್ ಗುರುಪುರ ಮನೆಯನ್ನು ಹಸ್ತಾಂತತರಿಸಿ ಅತಿಥಿಗಳನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಉಲಮಾ ಉಮರಾ ನಾಯಕರು ಉಪಸ್ಥಿತರಿದ್ದರು.