janadhvani

Kannada Online News Paper

ಲತೀಫ್ ಗುರುಪುರ ನೇತೃತ್ವದ ‘ಅನಿ ಟ್ರೇಡಿಂಗ್ ಸಂಸ್ಥೆ’ ಯಿಂದ ನಾಳೆ ಕನಸಿನ ಮನೆಯ ಲೋಕಾರ್ಪಣೆ

ಮಂಗಳೂರು: ನೊಂದವರ ಪಾಲಿನ ಸಾಂತ್ವನದ ಭರವಸೆಯಾಗಿರುವ ಲತೀಫ್ ಗುರುಪುರ ನೇತೃತ್ವದ ಅನಿ ಟ್ರೇಡಿಂಗ್ ಸಮೂಹ ಸಂಸ್ಥೆಯಿಂದ ಸೂರಿಲ್ಲದವರಿಗೆ ಆಸರೆ ಯೋಜನೆಯಡಿಯಲ್ಲಿ ಹೊಸ ಮನೆ ಕೀ ಹಸ್ತಾಂತರ ಕಾರ್ಯಕ್ರಮ ನಾಳೆ ಮಧ್ಯಾಹ್ನ ಮಂಗಳೂರು ತಾಲೂಕಿನ ಇನೋಳಿಯಲ್ಲಿ ನಡೆಯಲಿದೆ.

ಬಡ ಮತ್ತು ನಿರ್ಗತಿಕ ಕುಟುಂಬಗಳನ್ನು ಆಯ್ಕೆ ಮಾಡಿ ಕಳೆದ ವರ್ಷ 5ಮನೆ ನಿರ್ಮಿಸುವುದಾಗಿ ತೀರ್ಮಾನಿಸಲಾಗಿದ್ದು, ಇದೀಗ ಎರಡು ಮನೆಗಳು ಪೂರ್ತಿಗೊಂಡಿದ್ದು ಮೊದಲನೆಯ ಮನೆಯನ್ನು ದಿನಾಂಕ 10-03-2024 ಆದಿತ್ಯವಾರ(ನಾಳೆ) ಮಧ್ಯಾಹ್ನ 12:30ಕ್ಕೆ ಸಯ್ಯಿದ್ ಮುಹಮ್ಮದ್ ಶಮೀಮ್ ತಂಙಳ್ ಕುಂಬೋಳ್ ಕೀ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಿದ್ದಾರೆ. ನಾಳೆಯ ಮೊದಲನೆಯ ಮನೆಯನ್ನು ಹಸನಬ್ಬ(ಪುತ್ತಾಕ) ಕಡವು ಇವರಿಗೆ ಹಸ್ತಾಂತರಿಸುವುದಾಗಿ ಅನಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿವೆ.

ಫೋಟೋ: ಲತೀಫ್ ಗುರುಪುರ