janadhvani

Kannada Online News Paper

ಯುಎಇಯಲ್ಲಿ ಬಿರುಸಿನ ಮಳೆ- ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಮುನ್ನೆಚ್ಚರಿಕೆ

ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಕಾರ್ಮಿಕ ಸಚಿವಾಲಯ ನಿರ್ದೇಶನ ನೀಡಿದೆ.

ಅಬುಧಾಬಿ: ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ)ದ ಅಬುಧಾಬಿ ಸೇರಿದಂತೆ ಹಲವು ಭಾಗಗಳಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದೆ. ಇಡೀ ದೇಶವೇ ಹೈ ಅಲರ್ಟ್ ಆಗಿದೆ. ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗೆ ಬರದಂತೆ ಸರಕಾರ ಆದೇಶ ಹೊರಡಿಸಿದೆ.

ಯುಎಇಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜನರಿಗೆ ಮುನ್ನೆಚ್ಚರಿಕೆಯನ್ನೂ ನೀಡಿದೆ. ಹಲವೆಡೆ ಹಠಾತ್‌ ಮಳೆ ಮತ್ತು ಅದರಿಂದಾಗಿ ಪ್ರವಾಹ ಕೂಡ ಉಂಟಾಗಬಹುದು ಎಂದು ಸೂಚನೆ ನೀಡಿದೆ.

ಅಬುಧಾಬಿಯ ಅಲ್ ದಫ್ರಾ ಮತ್ತು ಅಲ್ ಐನ್ ನಲ್ಲಿ ಭಾರೀ ಮಳೆ ಆರಂಭವಾಗಿದೆ. ಮುನ್ನೆಚ್ಚರಿಕೆಯಾಗಿ ಶಾರ್ಜಾದಲ್ಲಿ ಉದ್ಯಾನವನಗಳನ್ನು ಮುಚ್ಚಲಾಗಿದೆ. ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಕಾರ್ಮಿಕ ಸಚಿವಾಲಯ ನಿರ್ದೇಶನ ನೀಡಿದೆ. ದೇಶದ ಮಸೀದಿಗಳಲ್ಲಿ, ಜುಮಾ ಪ್ರಾರ್ಥನೆಯ ನಂತರ, ಅಸ್ಥಿರ ವಾತಾವರಣದ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ.

ಯುಎಇ ವಿಪತ್ತು ನಿರ್ವಹಣಾ ಸಮಿತಿಯ ಮುನ್ನೆಚ್ಚರಿಕೆ ಶಿಫಾರಸುಗಳು

  • ಭಾರೀ ಮಳೆಯಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ
  • ಮಕ್ಕಳನ್ನು ಹೊರಗೆ ಆಟವಾಡಲು ಬಿಡಬೇಡಿ
  • ನೀರು ನಿಲ್ಲುವ ಪ್ರದೇಶಗಳಿಂದ ದೂರವಿರಿ
  • ನೀರು ಮೇಲೇರುವ ಸ್ಥಳದಿಂದ ದೂರ ಸರಿಯಿರಿ
  • ಪರ್ವತಗಳಿಂದ ಹರಿಯುವ ನೀರಿನ್ನು ದಾಟಬೇಡಿ
  • ಅರ್ಧ ಮುಳುಗಿದ ರಸ್ತೆಗಳನ್ನು ದಾಟಬೇಡಿ
  • ವಾದಿಗಳು ಮತ್ತು ಅಣೆಕಟ್ಟುಗಳಿಗೆ ಪ್ರಯಾಣಿಸಬೇಡಿ
  • ಹೊಳೆಗಳು ಮತ್ತು ನದಿಗಳಂತಹ ಪ್ರವಾಹಕ್ಕೆ ಒಳಗಾಗುವ ಪ್ರದೇಶಗಳನ್ನು ತಪ್ಪಿಸಿ
  • ಗಾಳಿ ಜೋರಾಗಿದ್ದರೆ ಹೊರಗೆ ಹೋಗಬೇಡಿ
  • ಮನೆಯ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ
  • ಮರಗಳು, ಜಾಹೀರಾತು ಫಲಕಗಳು ಮತ್ತು ಬೀಳಲು ಸಾಧ್ಯತೆ ಇರುವ ವಸ್ತುಗಳಿಂದ ದೂರವಿರಿ
  • ಆಲಿಕಲ್ಲು ಮಳೆಯ ಸಂದರ್ಭದಲ್ಲಿ ವಾಹನಗಳನ್ನು ಸುರಕ್ಷಿತವಾಗಿ ಮುಚ್ಚಿ

error: Content is protected !! Not allowed copy content from janadhvani.com