janadhvani

Kannada Online News Paper

ಕೃಷ್ಣಾಪುರದಲ್ಲಿ ಜಲ ಮಾಫಿಯಾ: ಕುಡಿಯುವ ನೀರಿಗೆ ಬರ- ಸಾರ್ವಜನಿಕರಿಂದ ಜಿಲ್ಲಾಧಿಕಾರಿಗೆ ದೂರು

ಕಾರ್ಖಾನೆಗೆ ತಮ್ಮ ಬಾವಿಯ ನೀರನ್ನು ಸರಬರಾಜು ಮಾಡುತ್ತಿರುವ ಕಾರಣ ಪರಿಸರದ ನೀರು ಬರಿದಾಗುತ್ತಿದ್ದು ಸ್ಥಳೀಯ ನಿವಾಸಿಗಳಿಗೆ. ಜನಸಾಮಾನ್ಯರಿಗೆ ಕುಡಿಯುವ ನೀರಿನ ಅಭಾವವಾಗಿ ಬಹಳ ತೊಂದರೆ ಉಂಟಾಗಿದೆ.

ಮಂಗಳೂರು: ಕೃಷ್ಣಾಪುರ ಕ್ರಾಸ್ ಮತ್ತು ಚೊಕ್ಕಬೆಟ್ಟು ಮಧ್ಯಭಾಗದಲ್ಲಿರುವ ಕೆಲವು ಮನೆಗಳಿಂದ ಎಂ.ಆರ್.ಪಿ.ಎಲ್ ಕಾರ್ಖಾನೆಗೆ ನೀರನ್ನು ಮಧ್ಯರಾತ್ರಿಯಲ್ಲಿ ಸರಬರಾಜು ಮಾಡುತ್ತಿರುವ ಜಲ ಮಾಫಿಯಾ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ನಾಗರಿಕರಿಗೆ ಸಮೀಪದಲ್ಲಿನ ಕೊಳವೆ ಬಾವಿಯಿಂದ ಪ್ರತೀ ಮನೆಗಳಿಗೆ ಕುಡಿಯುವ ನೀರನ್ನು ವಿತರಿಸುತ್ತಿದ್ದು, ಸದ್ರಿ ಮೇಲೆ ತಿಳಿಸಲಾದ ಕೆಲವು ಮನೆಗಳು ಕಾರ್ಖಾನೆಗೆ ತಮ್ಮ ಬಾವಿಯ ನೀರನ್ನು ಸರಬರಾಜು ಮಾಡುತ್ತಿರುವ ಕಾರಣ ಪರಿಸರದ ನೀರು ಬರಿದಾಗುತ್ತಿದ್ದು ಸ್ಥಳೀಯ ನಿವಾಸಿಗಳಿಗೆ. ಜನಸಾಮಾನ್ಯರಿಗೆ ಕುಡಿಯುವ ನೀರಿನ ಅಭಾವವಾಗಿ ಬಹಳ ತೊಂದರೆ ಉಂಟಾಗಿದೆ.

ಇದಕ್ಕೆ ಪರಿಹಾರ ಒದಗಿಸುವಂತೆ ಸಾರ್ವಜನಿಕರು ಮಾನ್ಯ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ.

“ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೃಷ್ಣಾಪುರ ಭಾಗದಲ್ಲಿ ಕುಡಿಯುವ ನೀರಿನ ಅಭಾವದಿಂದ ಸ್ಥಳೀಯ ನಾಗರಿಕರು ಬಳಲುತ್ತಿರುವ ಈ ಸಂದರ್ಭದಲ್ಲಿ ಕೃಷ್ಣಾಪುರ ಕ್ರಾಸ್ ಮತ್ತು ಚೊಕ್ಕಬೆಟ್ಟು ಮಧ್ಯಭಾಗದಲ್ಲಿರುವ ಕೆಲವು ಮನೆಗಳವರು ತಮ್ಮ ಬಾವಿಯಿಂದ ಎಂ.ಆರ್.ಪಿ.ಎಲ್ ಕಾರ್ಖಾನೆಗೆ ನೀರನ್ನು ಮಧ್ಯರಾತ್ರಿಯಲ್ಲಿ ಸರಬರಾಜು (ವಿಕ್ರಯಿಸುತ್ತಿರುವುದು) ಮಾಡಲಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಆದುದರಿಂದ ಗೌರವಾನ್ವಿತ ಅಧಿಕಾರಿಗಳು ತಕ್ಷಣವೇ ವಿಷಯದ ಕೂಲಂಕುಷ ಅಧ್ಯಯನ ನಡೆಸಿ, ನಮ್ಮ ಸಮಸ್ಯೆಯನ್ನು ಬಗೆಹರಿಸುವಲ್ಲಿ ಎಂ.ಆರ್.ಪಿ.ಎಲ್ ಕಾರ್ಖಾನೆಗೆ ನೀರು ಸರಬರಾಜು ಮಾಡುತ್ತಿರುವುದನ್ನು ಶಾಶ್ವತ ತಡೆಹಿಡಿದು ಪರಿಸರದವರಿಗೆ ನ್ಯಾಯ ಒದಗಿಸಿಕೊಡಬೇಕಾಗಿ ಈ ಮೂಲಕ ವಿನಂತಿಸುತ್ತೇವೆ”

error: Content is protected !! Not allowed copy content from janadhvani.com