janadhvani

Kannada Online News Paper

ಹೊಸನಗರ: ನವೀಕೃತ ಬದ್ರಿಯಾ ಮಸ್ಜಿದ್ ಉದ್ಘಾಟನೆ ಹಾಗೂ ಸೌಹಾರ್ದ ಸಮಾವೇಶ

ಶಿವಮೊಗ್ಗ: ಇಲ್ಲಿನ ಹೊಸನಗರದಲ್ಲಿ ನವೀಕೃತ ಬದ್ರಿಯಾ ಜುಮಾ ಮಸ್ಚಿದ್ ಇದರ ಉದ್ಘಾಟನೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಸಯ್ಯಿದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೊಳ್ ಅವರು ನವೀಕೃತ ಮಸೀದಿಯನ್ನು ಉದ್ಘಾಟಿಸಿದರು.

ನವೀಕೃತ ಮಸೀದಿಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ನಡೆದ ಸೌಹಾರ್ದ ಸಮಾವೇಶದಲ್ಲಿ ಬಾಳೆಹೊನ್ನೂರು ಮಂಝಿಲ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ಚೆಯರ್‌‌ಮೆನ್ ಅಸ್ಸಯ್ಯದ್ ಹಾಮೀಮ್ ತಙ್ಙಳ್ ಬಾಳೆಹೊನ್ನೂರು ದುಆಃ ಆಶಿರ್ವಚನ ನೀಡಿದರು. ಶ್ರೀ ಸದಾನಂದ ಶಿವಯೋಗಾಶ್ರಮ ಕ್ಷೇತ್ರ ಮೂಲಗದ್ದೆ ಮಠದ ಮಹಾಸ್ವಾಮಿಗಳಾದ ಶ್ರೀ ಅಭಿನವ ಚನ್ನಬಸವ ಸ್ವಾಮಿಗಳು, ಹೊಸನಗರ ಸಂತ ಅಂತೋನಿ ದೇವಾಲಯದ ಧರ್ಮ ಗುರುಗಳಾದ ಫಾದರ್ ಸೈಮನ್ ಹರ್ಟ್, ಬದ್ರಿಯಾ ಜುಮುಅಃ ಮಸ್ಜಿದ್ ಹೊಸನಗರ ಇದರ ಖತೀಬರಾದ ಡಿ.ಎಂ ಅಬೂಬಕರ್ ಮದನಿ ಕಡ್ತೂರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ಅಶ್ವಿನಿ ಕುಮಾರ್, ಸಾಮಾಜಿಕ ಮುಖಂಡರುಗಳಾದ ದೇವಾನಂದ, ಬಿಜಿ ನಾಗರಾಜ್, ನ್ಯಾಷನಲ್ ಗ್ರೂಪ್ ಮಾಲಿಕರಾದ ಅಬ್ದುಲ್ ರೆಹಮಾನ್ ತೀರ್ಥಹಳ್ಳಿ, ಶಿವಮೊಗ್ಗ ಮರ್ಕಝ್ ಸ‌‌ಆದಃ ಶಿಕ್ಷಣ ಸಂಸ್ಥೆಯ ಚೆಯರ್‌‌ಮೆನ್ ಸಯ್ಯಿದ್ ಶಹೀದುದ್ದೀನ್ ತಙ್ಙಳ್ ಅಲ್-ಬುಖಾರಿ ಶಿವಮೊಗ್ಗ, ಹೊಸನಗರ ಅಲ್-ಬದ್ರಿಯಾ ಮದ್ರಸಾದ ಮುಖ್ಯೋಪಾಧ್ಯಾಯರಾದ ಬದುರುದ್ದೀನ್ ಝುಹ್‌‌ರಿ ನೊಣಬೂರು, ಜಯನಗರ ಖತೀಬರಾದ ಶಾಹುಲ್ ಹಮೀದ್ ಸಖಾಫಿ ನೆಲ್ಯಾಡಿ, ಜಯನಗರ ಅರಬಿ ಸ್ಕೂಲ್ ಅಧ್ಯಾಪಕರಾದ ಉಮರುಲ್ ಫಾರೂಖ್ ಸಖಾಫಿ ವಳವೂರು, ಐ.ಕೆ ಇಕ್ಬಾಲ್ ಮದನಿ ಕುಕ್ಕೋಟ್ಟು, ಹಿರಿಯರಾದ ಜಿ ಮೊಹಮ್ಮದ್ ಹಾಜಿ, ಜಿ ಯೂಸುಫ್ ಹಾಜಿ, ಸೀದಿಯಬ್ಬ ಎನ್, ರಜಬ್, ಶೌಕತ್ ಆಲಿ, ಮೊಯಿದೀನ್, ಎಂಎಸ್ ಅಬೂಬಕರ್, ಶಿಮೊಗ್ಗ ಜಿಲ್ಲಾ ವಕ್ಫ್ ಅಧಿಕಾರಿಯದ ಸೈಯದ್ ಮೆಹತಾಬ್, ಜಾಮಿಯಾ ಮಸೀದಿಯ ಗುರುಗಳಾದ ಮುಕ್ತಿ ಮೊಹಮ್ಮದ್ ಇಂತಿಯಾಜ್, ಸಾಧಿಕ್ ಅಲಿ ಕಚ್ಚಿಗೆಬೈಲ್, ಅಬ್ದುಲ್ ಖಾದರ್ ನಿಟ್ಟೂರು, ಬದ್ರಿಯಾ ಮಸೀದಿ ಹೊಸನಗರ ಇದರ ಉಪಾಧ್ಯಕ್ಷರಾದ ಹೆಚ್ ಅಹಮದ್ ಸಾಬ್ ಸೇರಿದಂತೆ ಅನೇಕ ಧಾರ್ಮಿಕ-ಸಾಮಾಜಿಕ ಮುಖಂಡರು ಪ್ರಸ್ತುತ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಹೊಸನಗರ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಕೆ.ಎ ಖಾಳಿಯಾರ್ ಅಮಾನುಲ್ಲಾ ವಹಿಸಿದರು .
ಕಾರ್ಯಕ್ರಮದ ಪ್ರಾರಂಭದಲ್ಲಿ ಹೊಸನಗರ ಬದ್ರಿಯಾ ಜುಮುಅಃ ಮಸ್ಜಿದ್‌‌ನ
ಪ್ರಧಾನ ಕಾರ್ಯದರ್ಶಿ ಕೆ ಎ ಮೊಹಮ್ಮದ್ ಯಾಸಿರ್ ಸ್ವಾಗತಿಸಿದರು. “ಮಸೀದಿ ನವೀಕರಣಕ್ಕೆ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿ, ನವೀಕೃತ ಮಸೀದಿಯ ಉದ್ಘಾಟನಾ ಸಮಾರಂಭವು ಬರೀ ಧಾರ್ಮಿಕ ಕಾರ್ಯಕ್ಕೆ ಸೀಮಿತವಾಗದೆ ಸಾಮಾಜಿಕ- ಶೈಕ್ಷಣಿಕ ಕಾರ್ಯಕ್ರಮ ಆಗಬೇಕು ಎನ್ನುವ ಉದ್ದೇಶದಿಂದ ರಕ್ತದಾನ ಶಿಬಿರ ಹಾಗೂ ಸೌಹಾರ್ದ ಸಮಾರಂಭ ಪ್ರವಚನವನ್ನು ಏರ್ಪಡಿಸಲಾಗಿದೆ” ಎಂದು ವಿವರಿಸಿ ಕೊನೆಯಲ್ಲಿ ಎಲ್ಲರಿಗೂ ಪ್ರಧಾನ ಕಾರ್ಯದರ್ಶಿ ವಂದಿಸಿದರು.

error: Content is protected !! Not allowed copy content from janadhvani.com