ಡಿ.ಕೆ.ಎಸ್.ಸಿ. ಅಲ್ ಖರ್ಜ್ (ರಿಯಾದ್) ಸಮಿತಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಮಿತಿಯ ಅಧ್ಯಕ್ಷರಾದ ಜನಾಬ್ ಹಮೀದ್ ಹೊಸಂಗಡಿ ಇವರ ಅಧ್ಯಕ್ಷತೆಯಲ್ಲಿ ಗೂಡಿನಬಳಿ ಬಳಗದ ನಿವಾಸ ದಿಲಂನಲ್ಲಿ ಜರಗಿತು.
ಖಲೀಲ್ ಝುಹ್‌ರಿ ಇವರ ದುಆದ ಮೂಲಕ ಶುಭಾರಂಭಗೊಂಡ ಸಭೆಯಲ್ಲಿ ಬಶೀರ್ ಕೃಷ್ಣಾಪುರ ಖಿರಾಅತ್ ಪಾರಾಯಣಗೈದರು.
ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಹಮೀದ್ ಹೊಸಂಗಡಿ ಸಭಿಕರನ್ನು ಸ್ವಾಗತಿಸಿದರು. ಡಿ.ಕೆ.ಎಸ್.ಸಿ. ಕೇಂದ್ರ ಸಮಿತಿಯ ಕೋಶಾಧಿಕಾರಿ ದಾವೂದ್ ಕಜಮಾರ್ ಸಭೆಯನ್ನು ಉದ್ಘಾಟಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಮುನೀರ್ ಕೃಷ್ಣಾಪುರ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿ ಸಭೆಯ ಅಂಗೀಕಾರವನ್ನು ಪಡೆದುಕೊಂಡರು.
ರಿಯಾದ್ ಝೋನ್ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುರ್ರಹ್ಮಾನ್ ಸುಲೈಮಾನ್ ಉಚ್ಚಿಲ ರವರ ನೇತೃತ್ವದಲ್ಲಿ 2024-2025ರ ಸಾಲಿಗೆ ಈ ಕೆಳಗಿ ಸುದೃಢವಾದ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಜಾವಿದ್ ಗೂಡಿನ ಬಳಿ, ಪ್ರಧಾನ ಕಾರ್ಯದರ್ಶಿಯಾಗಿ ಮುನೀರ್ ಕೃಷ್ಣಾಪುರ, ಕೋಶಾಧಿಕಾರಿಯಾಗಿ ಬದ್ರುದ್ದೀನ್ ಗುರುಪುರ, ಉಪಾದ್ಯಕ್ಷರಾಗಿ ನಾಸಿರ್ ಗೂಡಿನಬಳಿ, ಕಾರ್ಯದರ್ಶಿಗಳಾಗಿ ಶಬೀರ್ ಗೂಡಿನ ಬಳಿ, ಬಶೀರ್ ಕೃಷ್ಣಾಪುರ, ಸಲಹೆಗಾರರಾಗಿ ಹಮೀದ್ ಹೊಸಂಗಡಿ, ಸಂಚಾಲಕರಾಗಿ ರವೂಫ್ ಗೂಡಿನಬಳಿ, ಆಯ್ಕೆಗೊಂಡರು.
ನೂತನ ಜತೆಕಾರ್ಯದರ್ಶಿ ಶಬೀರ್ ಗೂಡಿನಬಳಿ ಝೋನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಉಚ್ಚಿಲ ನಿರೂಪಿಸಿದರು.
ಮೂರು ಸ್ವಲಾತಿನೊಂದಿಗೆ ಸಭೆಯು ಮುಕ್ತಾಯಗೊಂಡಿತು.