janadhvani

Kannada Online News Paper

ಕೆ ಎ ಫ್ಯಾಮಿಲಿ ಕೊಡಂಗಾಯಿ ವತಿಯಿಂದ ಸನ್ಮಾನ ಕಾರ್ಯಕ್ರಮ

ವಿಟ್ಲ ಕೊಡಂಗಾಯಿ ಮರ್ಹೂಮ್ ಅಬೂಬಕ್ಕರ್ ಮುಕ್ರಿ ಜೈನಬ ಸ್ಮರಣಾರ್ಥ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೆ ಎ ಫ್ಯಾಮಿಲಿ ವತಿಯಿಂದ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಆಂಧ್ರಪ್ರದೇಶದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಹಿಂದಿ ಕವನ ವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ನಮ್ಮ ಕುಟುಂಬಕ್ಕೆ ಅಭಿಮಾನ ತಂದುಕೊಟ್ಟ ಪ್ರೀತಿಯ ಹಫೀಝ್ ಅಸೈಗೋಳಿ ಅವರನ್ನು K A ಫ್ಯಾಮಿಲಿ ಕೊಡಂಗಾಯಿ ವತಿಯಿಂದ ಮೆಮಂಟೋ ಮತ್ತು ಕ್ಯಾಷ್ ಅವಾರ್ಡ್ ನೀಡಿ ಕೊಡಂಗಾಯಿ ಎಸ್ ಎಮ್ ಎ ರಾಜ್ಯ ಕೋಶಾಧಿಕಾರಿ ಹಾಜಿ ಹಮೀದ್ ಅಧ್ಯಕ್ಷತೆಯಲ್ಲಿ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಬ್ದುಲ್ ಖಾದರ್ ಫೈಝಿ,ಅಬ್ದುಲ್ ರಝಾಕ್ ಬೋಳಿಯಾರ್, ಮೋನು ಅಸೈಗೋಳಿ , ಝಿಯಾದ್ ಸಖಾಫಿ, ತಾಜುದ್ದೀನ್ ಸಖಾಫಿ,ಝುಬೈರ್ ಮಲ್ಹರಿ,ಮುನೀರ್ ಉಕ್ಕುಡ, ಅಬ್ದುರಝಾಕ್ ಮಮ್ಮುಂಜಿ ಅಬ್ದುಲ್ ರಹಮಾನ್ ಪಿ ಪೆರ್ಲ,ಸಿರಾಜುದ್ದೀನ್ ಮುಸ್ಲಿಯಾರ್ ಹಾಫಿಝ್ ಸಅದ್ ಮುಸ್ಲಿಯರ್ ಇಲ್ಯಾಸ್ ಬೆಂಗಳೂರುಜುನೈದ್ ಬೋಳಿಯರ್ ನಾಸಿರ್ ಪರಪ್ಪು ಮುಂತಾದ ಕುಟುಂಬಿಕರು ಉಪಸ್ಥಿತರಿದ್ದರು

error: Content is protected !! Not allowed copy content from janadhvani.com