janadhvani

Kannada Online News Paper

ರಿಯಾದ್: ಮಧ್ಯಪ್ರಾಚ್ಯದಲ್ಲೇ ಅತಿ ಉದ್ದದ ಸುರಂಗ ಮಾರ್ಗ- ವಾಹನ ಸಂಚಾರ ಆರಂಭ

ಸುರಂಗವು 2,430 ಮೀ ಉದ್ದವಿದ್ದು, ಉದ್ಯಾನದ ಉತ್ತರದಿಂದ ದಕ್ಷಿಣದ ರಸ್ತೆಗೆ ವಿಸ್ತರಿಸಿದೆ.

ರಿಯಾದ್: ಸೌದಿ ರಾಜಧಾನಿಯಲ್ಲಿ ಉದ್ದೇಶಿತ ಕಿಂಗ್ ಸಲ್ಮಾನ್ ಪಾರ್ಕ್ ಯೋಜನೆಯಲ್ಲಿ ನಿರ್ಮಿಸಲಾದ ಅಬೂಬಕರ್ ಅಲ್ ಸಿದ್ದೀಕ್ ಸುರಂಗದಲ್ಲಿ ಸಂಚಾರ ಪ್ರಾರಂಭವಾಗಿದೆ. ಗುರುವಾರ ಬೆಳಗ್ಗೆಯಿಂದಲೇ ವಾಹನಗಳ ಓಡಾಟ ಆರಂಭಗೊಂಡಿದೆ. ಇದು ಮಧ್ಯಪ್ರಾಚ್ಯದಲ್ಲಿ ಅತಿ ಉದ್ದದ ಸುರಂಗವಾಗಿದೆ. ಹಳೆಯ ಸುರಂಗಗಳನ್ನು ಜೋಡಿಸಿ ಹೊಸ ಸುರಂಗವನ್ನು ನಿರ್ಮಿಸಲಾಗಿದೆ. ಪಾರ್ಕ್ ಯೋಜನೆಯಡಿ ಪೂರ್ಣಗೊಂಡ ಮೊದಲ ಸೇತುವೆ ಮತ್ತು ಸುರಂಗ ಇದಾಗಿದೆ. ಇದರ ನಿರ್ಮಾಣವು 2021 ರಲ್ಲಿ ಪ್ರಾರಂಭಗೊಂಡಿತ್ತು.ಸುರಂಗವು 2,430 ಮೀ ಉದ್ದವಿದ್ದು, ಉದ್ಯಾನದ ಉತ್ತರದಿಂದ ದಕ್ಷಿಣದ ರಸ್ತೆಗೆ ವಿಸ್ತರಿಸಿದೆ. ಇದರಲ್ಲಿ ಹೊಸದಾಗಿ ನಿರ್ಮಾಣವಾಗಿರುವ ವಿಭಾಗ 1,590 ಮೀ. ಉಳಿದ 840 ಮೀಟರ್ ಭಾಗವು ಅಬೂ ಬಕರ್ ಅಲ್ ಸಿದ್ದೀಕ್ ರಸ್ತೆಯಲ್ಲಿ ಅಸ್ತಿತ್ವದಲ್ಲಿರುವ ಸುರಂಗದಿಂದ ಬಂದಿದೆ. ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಎರಡನ್ನೂ ಒಂದೇ ಸುರಂಗವನ್ನಾಗಿ ಮಾಡಲಾಗಿದೆ.

ಮಧ್ಯಪ್ರಾಚ್ಯ ಉದ್ದದ ಸುರಂಗವನ್ನು ರಿಯಾದ್‌ನಲ್ಲಿ ತೆರೆಯಲಾಗಿದೆ. ಸಲ್ಮಾನಿಯಾ ವಾಸ್ತುಶಿಲ್ಪವನ್ನು ನಿರ್ಮಾಣದಲ್ಲಿ ಬಳಸಲಾಗಿದೆ. ಒಳಾಂಗಣ ವಿನ್ಯಾಸವು ರಿಯಾದ್ ನಗರದ ಕಲ್ಲಿನ ಮತ್ತು ಭೂವೈಜ್ಞಾನಿಕ ರಚನೆಯನ್ನು ಅನುಕರಿಸುತ್ತದೆ. ಗುರುವಾರದಿಂದ ಸುರಂಗ ಮಾರ್ಗದ ಮೂಲಕ ವಾಹನಗಳು ಸಂಚರಿಸಬಹುದಾಗಿದೆ ಎಂದು ಕಿಂಗ್ ಸಲ್ಮಾನ್ ಪಾರ್ಕ್ ಫೌಂಡೇಶನ್ ಆಡಳಿತ ಮಂಡಳಿ ತಿಳಿಸಿತ್ತು. ಸುರಂಗವು ಕಣ್ಣಿಗೆ ಕಟ್ಟುವಂತೆ ಆಧುನಿಕ ವಿನ್ಯಾಸ, ಸ್ಥಳೀಯ ಪರಿಸರಕ್ಕೆ ಹೊಂದಿಕೆಯಾಗುವ ಬಣ್ಣಗಳು ಮತ್ತು ಸುಸ್ಥಿರತೆಯ ಗುರಿಗಳನ್ನು ಪೂರೈಸುವ ವಸ್ತುಗಳನ್ನು ಒಳಗೊಂಡಿದೆ.

error: Content is protected !! Not allowed copy content from janadhvani.com