janadhvani

Kannada Online News Paper

ಡಿಕೆಯಸ್ಸಿ ಆಯೋಜಿಸಿದ ತರಬೇತಿ ಅಧಿವೇಷನ ಶ್ಲಾಘನೀಯ- ಝಕರಿಯ್ಯಾ ಮುಝೈನ್

ದಮ್ಮಾಮ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ದಮ್ಮಾಮ್ ವಲಯ ಅಧೀನದ ಜುಬೈಲ್ ಯೂತ್ ವಿಂಗ್ ಘಟಕದ ವಾರ್ಷಿಕ ಮಹಾಸಭೆ 1,ಮಾರ್ಚ್ 2024 ಶುಕ್ರವಾರ ಜುಮುಅ ನಮಾಝಿನ ಬಳಿಕ ಜುಬೈಲ್ ಹೋಟೆಲ್ ಕುಕ್ಝೋನ್ ಅಡಿಟೋರಿಯಂನಲ್ಲಿ ಜರಗಿತು. ಡಿಕೆಯಸ್ಸಿ ಜುಬೈಲ್ ಯೂತ್ ವಿಂಗ್ ಗೌರವಾಧ್ಯಕ್ಷ ಉಸ್ತಾದ್ ಪಿ.ಎಚ್. ಇಸ್ಮಾಯೀಲ್ ಉಸ್ತಾದ್ ದುಆ ಗೈದರು.

ಡಿಕೆಯಸ್ಸಿ ಜುಬೈಲ್ ಯೂತ್ ವಿಂಗ್ ಘಟಕದ ಅಧ್ಯಕ್ಷ ಸಫ್ವಾನ್ ಕಣ್ಣಂಗಾರ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಯು.ಡಿ. ಅಬ್ದುಲ್ ಹಮೀದ್ ಖಿರಾಅತ್ ಪಠಿಸಿದರು.
ಡಿಕೆಯಸ್ಸಿ ದಮ್ಮಾಂ ವಲಯದ ಅಧ್ಯಕ್ಷ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ ಅಲ್ಲಾಹನ ಪವಿತ್ರ ನಾಮದಿಂದ ಸಮಾರಂಭವನ್ನು ಉದ್ಘಾಟಿಸಿದರು. ಜುಬೈಲ್ ಯೂತ್ ವಿಂಗ್ ಪ್ರಧಾನ ಕಾರ್ಯದರ್ಶಿ ಸಫೀರ್ ಗೂಡಿನಬಳಿ ಸಭೆಗೆ ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು. ವಾರ್ಷಿಕ ವರದಿ ಮತ್ತು ಪ್ರವರ್ತನಾ ವರದಿ ಗಳನ್ನು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಫೀರ್ ಗೂಡಿನಬಳಿ ರವರು ಡಾಕ್ಯುಮೆಂಟರಿ ಮೂಲಕ ವಿವರಿಸಿದರು ಹಾಗೂ ಸಭೆಯ ಅನುಮೋದನೆಯನ್ನು ಪಡೆದರು.
ಡಿಕೆಯಸ್ಸಿ ಜುಬೈಲ್ ಯೂತ್ ವಿಂಗ್ ಪ್ರಸಕ್ತ ಸಾಲಿನಲ್ಲಿ ವಿವಿಧ ಹುದ್ದೆಗಳಿಗೆ ಟ್ರೈನಿಂಗ್ ಅಧಿವೇಶನ ನಡೆಸಿದ 4 ಮಂದಿಯನ್ನು ಆದರದಿಂದ ಸನ್ಮಾನಿಸಲಾಯಿತು.
1. ಅಬ್ದುಲ್ ಹಮೀದ್ ಮಾವಿನಡಿ ( Safety Officer)
2. ಮುಹಮ್ಮದ್ ರಹೀಲ್ ಮಂಗಳೂರು( Senior Mechanical Engineer)
3. ಹಾರಿಸ್ ಕಣ್ಣಂಗಾರ್ ( Civil Engineer)
4. ವಝೀರ್ ಸುಲ್ತಾನ್ ( Plant Inspector)

ಅಧ್ಯಕ್ಷರಾದ ಸಫ್ವಾನ್ ಕಣ್ಣಂಗಾರ್ ರವರು ಮಾತನಾಡಿ ಮುಂದಿನ ದಿನ ಗಳಲ್ಲಿ ಯುವ ಜನತೆ ಯನ್ನು ಡಿಕೆಯಸ್ಸಿ ಗೆ ಸದಸ್ಯರನ್ನಾಗಿ ಮಾಡಿ ಡಿಕೆಯಸ್ಸಿ ಯ ಅಭಿವೃದ್ಧಿ ಕಾರ್ಯಗಳನ್ನು ಅವರಿಗೆ ಮನವರಿಕೆ ಮಾಡಿ ಕೊಡುವ ಬಗ್ಗೆ ಹಾಗೂ ಪ್ರಸಕ್ತ ಸಾಲಿನಲ್ಲಿ ನಡೆಸಿದ ತರಬೇತಿ ಶಿಬಿರ ಗಳನ್ನು ಅಭಿವ್ರಧ್ಧಿ ಪಡಿಸುವ ಬಗ್ಗೆ ಮುತುವರ್ಜಿ ವಹಿಸಬೇಕೆಂದು ತಿಳಿಸಿದರು. ಈ ಬಗ್ಗೆ ವಲಯ ಸಮಿತಿಯಿಂದಲೂ ಸಲಹೆ ಸೂಚನೆ ಗಳನ್ನು ಪಡೆದು ಅದರಂತೆ ಕಾರ್ಯ ಪ್ರವರ್ತಕ ರಾಗುವ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿಕೆಯಸ್ಸಿಯ ಹಿರಿಯ ಸಲಹೆಗಾರ ಹಾಜಿ ಝಕರಿಯಾ ಅಲ್ ಮುಝೈನ್ ಮಾತನಾಡುತ್ತಾ ಡಿಕೆಯಸ್ಸಿ ಜುಬೈಲ್ ಯೂತ್ ವಿಂಗ್ ಪ್ರಸಕ್ತ ವರ್ಷ ಆಯೋಜಿಸಿದ ಟ್ರೈನಿಂಗ್ ಸೆಂಟರ್ ನಿಂದ ನೂರರಷ್ಟು ವಿದ್ಯಾರ್ಥಿಗಳು ತರಬೇತಿ ಪಡೆದು ಉತ್ತೀರ್ಣ ಹೊಂದಿ ವಿವಿಧ ಕಂಪೆನಿಗಳಲ್ಲಿ ಉತ್ತಮ ಹುದ್ದೆಯಲ್ಲಿರಲು ಕಾರಣವಾಗಿದೆ. ಅವರ ಮಾತಾಪಿತರ ಪ್ರಾರ್ಥನೆಯೇ ನಮ್ಮೆಲ್ಲರ ಇಹ-ಪರ ಯಶಸ್ವಿಗೆ ಕಾರಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಡಿಕೆಯಸ್ಸಿಯ ಇತಿಹಾಸದಲ್ಲಿ ಜುಬೈಲ್ ಯೂತ್ ವಿಂಗ್ ಕಾರ್ಯಕರ್ತರು ಸಲ್ಲಿಸಿದ ಸೇವೆ ನಿಜಕ್ಕೂ ಶ್ಲಾಘನೀಯ. ಅಲ್ಲಾಹು ಸ್ವೀಕರಿಸಲಿ ಎಂದು ಪ್ರಾರ್ಥಿಸಿದರು.
ಇಂತಹ ಕಾರ್ಯಕ್ರಮಗಳು ಮಾತ್ರವಲ್ಲದೇ ಉದ್ಯೋಗ ಮೇಳ ಗಳನ್ನು ಜಾತಿ ಮತವಿಲ್ಲದೇ ನಡೆಸುವುದಿದ್ದಲ್ಲಿ ನಮ್ಮಿಂದ ಯಾವುದೇ ರೀತಿಯ ತನು-ಮನ-ಧನ ದೊಂದಿಗಿನ ಸಹಾಯ ಸಹಕಾರಕ್ಕೆ ನಾನು ಡಿಕೆಯಸ್ಸಿ ಯೂತ್ ವಿಂಗ್ ನೊಂದಿಗಿದ್ದೇನೆ ಎಂದು ಸದಸ್ಯರನ್ನು ಹುರಿದುಂಬಿಸಿದರು.

ಇನ್ನೋರ್ವ ಮುಖ್ಯ ಅತಿಥಿ ಅಸ್ಕಾಫ್ ರವರು ಡಿಕೆಯಸ್ಸಿಯು ಊರಿನಲ್ಲಿ ವಿವಿಧ ರೀತಿಯ ಧಾರ್ಮಿಕ- ಲೌಕಿಕ ವಿದ್ಯಾಭ್ಯಾಸವನ್ನು ನೀಡಿ ಅದರಿಂದ ತೇರ್ಗಡೆ ಹೊಂದಿ ಗಲ್ಫ್ ರಾಷ್ಟ್ರಗಳಲ್ಲಿ ಬರುವ ಯುವ ಜನಾಂಗಕ್ಕೆ ವಿವಿಧ ಹುದ್ದೆಗಳಲ್ಲಿ ತರಬೇತಿ ನೀಡಿ ಉನ್ನತ ಹುದ್ದೆಗಳನ್ನು ನೀಡುವುದರ ಮೂಲಕ ಡಿಕೆಯಸ್ಸಿ ಯ ಪುರೋಭಿವ್ರಧ್ಧಿಗೆ ಉತ್ತಮ ಫಲಿತಾಂಶವನ್ನು ನೀಡಲಿದೆ. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯವನ್ನು ನೀಡಲು ನಾವು ಸದಾ ಸಿದ್ಧ ಎಂದು ನುಡಿದರು.

ವಿಶೇಷ ಅತಿಥಿಗಳಾಗಿ ಡಿಕೆಯಸ್ಸಿ ಖತಾರ್ ರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷ ಅಬ್ದಲ್ಲಾ: ಉಚ್ಚಿಲ ರವರು ಆಗಮಿಸಿ ಡಿಕೆಯಸ್ಸಿಯ ಪ್ರವರ್ತನೆಗಳನ್ನು ಪ್ರಶಂಷಿಸಿ ತಾವುಗಳೆಲ್ಲರೂ ಅದರ ಅಭಿವೃದ್ಧಿಗೆ ಶಕ್ತಿಮೀರಿ ದುಡಿದು ಡಿಕೆಯಸ್ಸಿ ಯ ಪತಾಕೆಯನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹಾರಿಸುವಲ್ಲಿ ಸಹಕರಿಸಿರಿ ಎಂದು ಕಿವಿ ಮಾತನಾಡಿದರು. ಅವರನ್ನು ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.
ಡಿಕೆಯಸ್ಸಿಯ 1995 ರ ಪ್ರಾರಂಭ ಕಾಲದಿಂದ 29 ವರ್ಷಗಳ ಕಾಲ ಸುದೀರ್ಘ ಡಿಕೆಯಸ್ಸಿಗಾಗಿ ಸೇವೆ ಸಲ್ಲಿಸಿ ಗಲ್ಫ್ ಜೀವನಕ್ಕೆ ವಿದಾಯ ಹಾಕಿ ತಾಯ್ನಾಡಿಗೆ ತೆರಳುತ್ತಿರುವ ಡಿಕೆಯಸ್ಸಿ ದಮ್ಮಾಂ ವಲಯ ಅಧ್ಯಕ್ಷ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು ಹಾಗೂ ಸವಿ ನೆನಪಿಗಾಗಿ ಮೊಮೆಂಟೊ ನೀಡಿ ಗೌರವಿಸಲಾಯಿತು.
ಡಿಕೆಯಸ್ಸಿ ದಮ್ಮಾಮ್ ವಲಯದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ರವರ ಉಸ್ತುವಾರಿಯಲ್ಲಿ 2024-25 ನೇ ಸಾಲಿಗೆ ನೂತನ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ಅಹ್ಮದ್ ಸಫ್ವಾನ್ ಪುನರಾಯ್ಕೆಗೊಂಡರು. ಗೌರವ ಅಧ್ಯಕ್ಷರಾಗಿ ಪಿ.ಎಚ್. ಇಸ್ಮಾಯೀಲ್ ಉಸ್ತಾದ್ ಪ್ರಧಾನ ಕಾರ್ಯದರ್ಶಿ ಯಾಗಿ ಮುಹಮ್ಮದ್ ಸಫೀರ್ ಗೂಡಿನಬಳಿ ಹಾಗೂ ಕೋಶಾಧಿಕಾರಿ ಯಾಗಿ ಮುಹಮ್ಮದ್ ಶಾಮಿತ್ ಪಡುಬಿದ್ರಿ ರವರನ್ನು ಆರಿಸಲಾಯಿತು.

ಉಪಾಧ್ಯಕ್ಷರಾಗಿ
ಅಝರ್ ಪಡುಬಿದ್ರಿ ಮತ್ತು ಅಝ್ ವಿಲ್ ಕೂಳೂರು ಕಾರ್ಯದರ್ಶಿಗಳಾಗಿ ಜವಾದ್ ಉಳ್ಳಾಲ ಮತ್ತು ರಕೀನ್ ಹಳೆಯಂಗಡಿ ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ನಿಶಾಯಿಲ್ ಕೂಳೂರು ಹಾಗೂ ಮೀಡಿಯಾ ವಿಭಾಗಕ್ಕೆ ರಿಯಾಝ್ ಪಡುಬಿದ್ರಿ ರವರನ್ನು ನೇಮಕ ಗೊಳಿಸಲಾಯಿತು.
ಉಳಿದ 17 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ಆರಿಸಲಾಯಿತು.
ಡಿಕೆಯಸ್ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಆತೂರು, ಕೇಂದ್ರ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸೂರಿಂಜೆ, ಕೇಂದ್ರ ಸಮಿತಿ ಕಾರ್ಯದರ್ಶಿಗಳಾದ ಅಬೂಬಕ್ಕರ್ ಬರ್ವ, ಮೀಡಿಯಾ ವಿಭಾಗದ ಅಬ್ದುಲ್ ಗಫೂರ್ ಸಜಿಪ, ಹಿರಿಯ ನಾಯಕ ರಾದ ಹಾತಿಂ ಕೂಳೂರು, ಯು.ಡಿ.ಅಬ್ದುಲ್ ಹಮೀದ್ ಉಳ್ಳಾಲ ಹಾಗೂ ಜುಬೈಲ್ ಘಟಕದ ಅಧ್ಯಕ್ಷ ಅಶ್ರಫ್ ನಾಳ, ದಮ್ಮಾಂ ಘಟಕದ ಅಧ್ಯಕ್ಷ ಸಯ್ಯದ್ ಬಾವ ಬಜ್ಪೆ , ಅಲ್ ಖೋಬರ್ ಘಟಕದ ಅಧ್ಯಕ್ಷ ಅಶ್ರಫ್ ಚಿಕ್ಕ ಮಗಳೂರು, ತುಖ್ಬಾ ಘಟಕದ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು, ಮುಹಮ್ಮದ್ ಅಲೀ ಮುಝೈನ್, ಅಬ್ದುಲ್ ಕರೀಂ ಪಾಣೆಮಂಗಳೂರು, ಫಾರೂಖ್ ಕನ್ಯಾನ, ಸಲೀಂ ಉಡುಪಿ, ಅಬೂಬಕ್ಕರ್ ಅಜಿಲಮೊಗರು , ಉಮರ್ ಮರವೂರು, ಶೌಕತ್ ತೀರ್ಥಹಳ್ಳಿ ಆಗಮಿಸಿ ನೂತನ ಸಮಿತಿಗೆ ಶುಭಾಷಂಸೆ ಗೈದು ಹಾರೈಸಿದರು.

ಗೌರವ ಅಧ್ಯಕ್ಷರಾದ ಪಿ.ಎಚ್. ಇಸ್ಮಾಯೀಲ್ ಉಸ್ತಾದ್ ಮಾತನಾಡಿ ಡಿಕೆಯಸ್ಸಿ ಯು ಹಮ್ಮಿಕೊಂಡ ಯೋಜನೆಗಳನ್ನು ಸಂಪೂರ್ಣ ಗೊಳಿಸುವಲ್ಲಿ ತಾವುಗಳೆಲ್ಲರ ಸಹಾಯ ಸಹಕಾರ ಅಗತ್ಯವಿದ್ದು ಯಶಸ್ವಿಗೊಳಿಸುವಲ್ಲಿ ಸಹಕರಿಸಿರಿ ಎಂದು ನುಡಿದರು.
ಸಭೆಯ ಕೊನೆಯಲ್ಲಿ ನೂತನ ಜೊತೆ ಕಾರ್ಯದರ್ಶಿ ಅಝ್ ವಿಲ್ ಕೂಳೂರು ಧನ್ಯವಾದಗೈದರು.

ವರದಿ: ಇಸ್ಮಾಯೀಲ್ ಕಾಟಿಪಳ್ಳ ದಮ್ಮಾಂ

error: Content is protected !! Not allowed copy content from janadhvani.com