janadhvani

Kannada Online News Paper

ಕೋಝಿಕ್ಕೋಡ್‌- ಜಿದ್ದಾ ನಡುವೆ ಫ್ಲೈ ನಾಸ್‌ನಿಂದ ನೇರ ವಿಮಾನಯಾನ ಸೇವೆ ಆರಂಭ

ಕರಿಪುರ ವಿಮಾನ ನಿಲ್ದಾಣದಲ್ಲಿ ಆಯೋಜಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ, ಏರ್‌ಲೈನ್‌ಗಳು ಹೆಚ್ಚಿನ ವಿಮಾನ ಸೇವೆಗಳನ್ನು ಪ್ರಾರಂಭಿಸಲು ಸಿದ್ಧವಿರುವುದಾಗಿ ತಿಳಿಸಿದೆ

ಕೋಝಿಕ್ಕೋಡ್| ಕರಿಪುರದಿಂದ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಅಂತಾರಾಷ್ಟ್ರೀಯ ದೇಶೀಯ ವಿಮಾನ ಸೇವೆಗಳನ್ನು ನಿರ್ವಹಿಸಲು ಮುಂದಾಗಿದೆ . ಅಲ್ ಹಿಂದ್ ಟೂರ್ಸ್ ಮತ್ತು ಟ್ರಾವೆಲ್ಸ್ ಗ್ರೂಪ್ ಏರ್‌ಪೋರ್ಟ್‌ ಅಥಾರಿಟಿಯ ಸಹಯೋಗದಲ್ಲಿ ಕರಿಪುರ ವಿಮಾನ ನಿಲ್ದಾಣದಲ್ಲಿ ಆಯೋಜಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ, ಏರ್‌ಲೈನ್‌ಗಳು ಹೆಚ್ಚಿನ ವಿಮಾನ ಸೇವೆಗಳನ್ನು ಪ್ರಾರಂಭಿಸಲು ಸಿದ್ಧವಿರುವುದಾಗಿ ತಿಳಿಸಿದೆ. ಮುಂದಿನ ಅಕ್ಟೋಬರ್‌ನಿಂದ ಕರಿಪುರದಿಂದ ಜಿದ್ದಾಗೆ ಸೇವೆ ಆರಂಭವಾಗಲಿದೆ ಎಂದು ಫ್ಲೈ ನಾಸ್‌ನ ಕಂಟ್ರಿ ಮ್ಯಾನೇಜ‌ರ್ ಸಲೀಂ ಮಾಹಿತಿ ನೀಡಿದ್ದಾರೆ.

ಜನಪ್ರತಿನಿಧಿಗಳ ಜತೆಗೆ ವಿವಿಧ ವಿಮಾನಯಾನ ಸಂಸ್ಥೆಗಳೂ ಪಾಲ್ಗೊಂಡಿದ್ದವು. ಗಲ್ಫ್ ಪ್ರದೇಶವನ್ನು ಹೊರತುಪಡಿಸಿ ದೂರದ ಪೂರ್ವಕ್ಕೆ ಕರಿಪುರದಿಂದ ಸೇವೆಯನ್ನು ಪ್ರಾರಂಭಿಸುವುದು ಮುಖ್ಯ ಗುರಿಯಾಗಿದೆ. ನಾಲ್ಕು ತಿಂಗಳೊಳಗೆ ಕೌಲಾಲಂಪುರ್-ಬ್ಯಾಂಕಾಕ್ ವಲಯಕ್ಕೆ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಸಭೆಯಲ್ಲಿ ಏರ್ ಏಷ್ಯಾದ ಪ್ರತಿನಿಧಿ ಕಿಶೋ‌ರ್ ಹೇಳಿದರು. ಶ್ರೀಲಂಕಾ ಮೂಲದ ಫಿಟ್ಸ್ ಏರ್ ಕರಿಪುರ-ಕೊಲಂಬೊ ಸೇವೆಯನ್ನು ಆರಂಭಿಸಲಿದೆ ಎಂದು ಫಿಟ್ಸ್ ಏ‌ರ್ ಸೇಲ್ಸ್ ಮ್ಯಾನೇಜರ್ ಅಬ್ದುಲ್ ಜಲೀಲ್ ಘೋಷಿಸಿದ್ದಾರೆ. ಕರಿಪುರ-ದೆಹಲಿ ದೈನಂದಿನ ಸೇವೆ, ಕರಿಪುರ ಶಾರ್ಜಾ ಮತ್ತು ದುಬೈ ವಲಯಕ್ಕೆ ಹೆಚ್ಚಿನ ಸೇವೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಏರ್ ಇಂಡಿಯಾದ ಪ್ರತಿನಿಧಿ ವ್ಯವಸ್ಥಾಪಕಿ ಬಿಂದು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಸಲಹಾ ಸಮಿತಿ ಅಧ್ಯಕ್ಷ ಎಂ.ಪಿ.ಅಬ್ದುಸಮದ್‌ ಸಮದಾನಿ ಎಂಪಿ ಅಧ್ಯಕ್ಷತೆ ವಹಿಸಿದ್ದರು. ಸಂಸದರಾದ ಎಂ.ಕೆ.ರಾಘವನ್, ಎಳಮರಮ್ ಕರೀಮ್, ಶಾಸಕ ಟಿ.ವಿ.ಇಬ್ರಾಹಿಂ, ಮಲಪ್ಪುರಂ ಜಿಲ್ಲಾಧಿಕಾರಿ ಸುಮಿತ್ ಕುಮಾ‌ರ್ ಠಾಕೂರ್, ವಿಮಾನ ನಿಲ್ದಾಣ ನಿರ್ದೇಶಕ ಎಸ್.ಸುರೇಶ್, ಅಲ್ಹಿಂದ್ ಗ್ರೂಪ್‌ ಅಧ್ಯಕ್ಷ ಮುಹಮ್ಮದ್ ಹಾರಿಸ್, ವ್ಯವಸ್ಥಾಪಕ ನಿರ್ದೇಶಕ ಪಿ.ವಿ.ವತ್ಸರಾಜ್, ಏರ್ ಲೈನ್ಸ್ ಕಂಪನಿ ಪ್ರತಿನಿಧಿಗಳಾದ ಮೀರಾ (ಸ್ಕೂಟ್), ನೌಶಾದ್‌ (ಕುವೈತ್‌ ಏರ್ ಲೈನ್ಸ್), ಬಿಜೋಯ್ ಪದ್ಮನಾಭನ್ (ಕತಾ‌ರ್ ಏರ್‌ವೇಸ್‌), ಜೆರಿನ್ (ಫ್ಲೈ ದುಬೈ), ಪ್ರವೀಣ್‌ (ಏರ್ ಇಂಡಿಯಾ ಎಕ್ಸ್‌ಪ್ರೆಸ್‌), ಪ್ರೇಮ್‌ಜಿತ್‌ (ಏ‌ರ್ ಇಂಡಿಯಾ), ಮುರಳಿದಾಸ್ (ಆಕಾಶ ಏರ್), ವಿಷ್ಣು (ಜಝೀರಾ), ಪ್ರಶಾಂತ್ (ಒಮಾನ್ ಏರ್) ), ಮಿಥುನ್ (ಏರ್ ಅರೇಬಿಯಾ), ಬಿನೋಯ್ (ಇಂಡಿಗೋ), ಅಮಿತ್, ಕಣ್ಣನ್ ಅಯ್ಯರ್ (ಸ್ಪೈಸ್ ಜೆಟ್), ವಿನೀಶ್ (ವಿಸ್ತಾರಾ), ಅಫೈಲ್ ಅಬ್ದುಲ್ ರಶೀದ್ (ಸಲಾಮ್ ಏರ್), ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂಎ ಮೆಹಬೂಬ್, ಕ್ಯಾಲಿಕಟ್ ಚೇಂಬ‌ರ್ ಆಫ್‌ ಕಾಮರ್ಸ್‌ ಅಧ್ಯಕ್ಷ ವಿನೀಶ್ ವಿದ್ಯಾಧರನ್, ಹಾಶೀ‌ರ್ ಅಲಿ, ನಜೀರ್, ಅಲ್ಲಿಂದ್ ಕಾರ್ಯಕಾರಿ ನಿರ್ದೇಶಕ ಎಂಪಿಎಂ ಮುಬಾಶಿರ್, ಅಲ್ಲಿಂದ್ ಕಾರ್ಪೊರೇಟ್ ನಿರ್ದೇಶಕ ನೂರುದ್ದೀನ್ ಎ ಅಹಮದ್‌ ಮಾತನಾಡಿದರು.

error: Content is protected !! Not allowed copy content from janadhvani.com