ಉಪ್ಪಿನಂಗಡಿ: ಪ್ರಮುಖ ವಿದ್ವಾಂಸರು, ಸುನ್ನೀ ಸಂಘಟನೆಗಳ ಸಕ್ರೀಯ ನಾಯಕತ್ವ ಸಯ್ಯಿದ್ ಕರ್ವೇಲ್ ಸಾದತ್ ತಂಙಳ್ ಇಂದು ಬೆಳಿಗ್ಗೆ ವಫಾತಾದರು.
ಚಿರಯುವಕರಂತೆ ಸುನ್ನತ್ ಜಮಾಅತಿಗಾಗಿ ಹಗಳಿರುಳು ದುಡಿಯುತ್ತಿದ್ದ ಪ್ರವಾದಿ ಕುಟುಂಬದ ಕರುಳ ಕುಡಿ ಸುನ್ನೀ ಜನ ಸಮೂಹಕ್ಕೆ ಮಾರ್ಗದರ್ಶಿಯಾಗಿದ್ದ ಸಯ್ಯಿದರು, ಕಳೆದ ಒಂದು ವಾರದ ಹಿಂದೆ ನಡೆದ ರಿಕ್ಷಾ ಅಪಘಾತದಲ್ಲಿ ತೀವ್ರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಇಂದು ಮುಂಜಾನೆ ಹೊತ್ತು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾಗಿ ಸಯ್ಯಿದರ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ನಿನ್ನೆ ತಾನೇ ತಂಙಳರ ಸಹೋದರಿಯ ಮಗಳು ಹೃದಯಾಘಾತದಿಂದ ನಿಧನ ಹೊಂದಿದ್ದು ಇದರ ಬೆನ್ನಲ್ಲೇ ತಂಙಳರ ಮರಣ ಸಂಭವಿಸಿದೆ. ಸಯ್ಯಿದರ ಕುಟುಂಬಸ್ಥರು ಮತ್ತು ಸುನ್ನೀ ಸಮೂಹವನ್ನು ದುಃಖದ ಕಣ್ಣೀರಿನಲ್ಲಿ ಮುಳುಗುಸಿದೆ.
ಅವರ ಕುಟುಂಬಕ್ಕೆ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಅಲ್ಲಾಹು ನೀಡಲಿ. ಎಲ್ಲಾ ಉಲಮಾ,ಉಮರಾ, ನಾಯಕರು ,ಕಾರ್ಯಕರ್ತರು ತಂಙಳರ ಮೇಲೆ ಕುರುಆನ್ ಓದಿ, ತಹ್ಲೀಲ್ ಹೇಳಿ ದುಆ ಮಾಡಬೇಕಾಗಿ ಸುನ್ನೀ ಸಂಘ ಸಂಸ್ಥೆಗಳು ವಿನಂತಿಸಿವೆ.