janadhvani

Kannada Online News Paper

ಬಹ್ರೇನ್: ವಿಸಿಟ್ ವೀಸಾಗಳನ್ನು ವರ್ಕಿಂಗ್ ವೀಸಾ ಆಗಿ ಪರಿವರ್ತಿಸಲು 250 ದೀನಾ‌ರ್

ಪ್ರಾಯೋಜಕರಿಲ್ಲದ ಭೇಟಿ ವೀಸಾಗಳನ್ನು ಸಹ ಕೆಲಸದ ವೀಸಾ ಅಥವಾ ಅವಲಂಬಿತ ವೀಸಾಗಳಾಗಿ ಪರಿವರ್ತಿಸುವುದನ್ನು ನಿಲ್ಲಿಸಲಾಗಿದೆ ಎಂದು NPRA ಘೋಷಿಸಿದೆ.

ಮನಾಮ : ವಿಸಿಟ್ ವೀಸಾಗಳನ್ನು ವರ್ಕಿಂಗ್ ವೀಸಾ ಅಥವಾ ಅವಲಂಬಿತ ವೀಸಾಗಳಾಗಿ ಪರಿವರ್ತಿಸುವ ಶುಲ್ಕವನ್ನು 60 ದಿನಾರ್‌ಗಳಿಂದ 250 ದಿನಾರ್‌ಳಿಗೆ ಹೆಚ್ಚಿಸಲಾಗುವುದು ಎಂದು ಬಹ್ರೇನ್ ರಾಷ್ಟ್ರೀಯ ಪಾಸ್‌ಪೋರ್ಟ್‌ ನಿವಾಸ ವ್ಯವಹಾರಗಳು (Nationality, Passports and Residence Affairs) ತಿಳಿಸಿದೆ.

ಪ್ರಾಯೋಜಕರಿಲ್ಲದೆ ಭೇಟಿ ವೀಸಾಗಳನ್ನು ಸಹ ಕೆಲಸದ ವೀಸಾ ಅಥವಾ ಅವಲಂಬಿತ ವೀಸಾಗಳಾಗಿ ಪರಿವರ್ತಿಸುವುದನ್ನು ನಿಲ್ಲಿಸಲಾಗಿದೆ ಎಂದು NPRA ಘೋಷಿಸಿದೆ. ವಿಸಿಟ್ ವೀಸಾಗಳನ್ನು ವರ್ಕಿಂಗ್ ಮತ್ತು ಅವಲಂಬಿತ ವೀಸಾಗಳಾಗಿ ಪರಿವರ್ತಿಸುವ ನಿಯಮಗಳನ್ನು ಬಿಗಿಗೊಳಿಸುವ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಗೃಹ ಸಚಿವರು ಈ ನಿರ್ದೇಶನ ನೀಡಿದ್ದಾರೆ.

error: Content is protected !! Not allowed copy content from janadhvani.com