ಡಿ.ಕೆ.ಎಸ್.ಸಿ. ಬತ್ತಾ (ರಿಯಾದ್) ಸಮಿತಿಯ ವಾರ್ಷಿಕ ಮಹಾಸಭೆಯು ದಿನಾಂಕ 01-12-2024ರ ಗುರುವಾರ ಅಸ್ತ ಶುಕ್ರವಾರ ರಾತ್ರಿ ಸಮಿತಿಯ ಅಧ್ಯಕ್ಷರಾದ ಜನಾಬ್ ದಾವೂದ್ ಕಂದಕ್ ಇವರ ಬತ್ತಾದಲ್ಲಿರುವ ನಿವಾಸದಲ್ಲಿ
ದಾವೂದ್ ಕಂದಕ್ ರವರ ನೇತೃತ್ವದಲ್ಲಿ ಜರಗಿತು.
ಮುಸ್ತಫಾ ಸಅದಿ ಸೂರಿಕುಮೇರು ಇವರ ದುಆದ ಮೂಲಕ ಶುಭಾರಂಭಗೊಂಡ ಸಭೆಯಲ್ಲಿ ಅಬ್ದುಲ್ ಅಝೀಝ್ ಮದನಿ ಕೊಕ್ಕಡ ಖಿರಾಅತ್ ಪಾರಾಯಣಗೈದರು. ಡಿ.ಕೆ.ಎಸ್.ಸಿ. ಕೇಂದ್ರ ಸಮಿತಿಯ ಕೋಶಾಧಿಕಾರಿ ದಾವೂದ್ ಕಜಮಾರ್ ಸಭೆಯನ್ನು ಉದ್ಘಾಟಿಸಿದರು. ಸಮಿತಿಯ ಕೋಶಾಧಿಕಾರಿ ಜನಾಬ್ ಹುಸೈನ್ ಕೃಷ್ಣಾಪುರ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿ ಸಭೆಯ ಅಂಗೀಕಾರವನ್ನು ಪಡೆದುಕೊಂಡರು.
ರಿಯಾದ್ ಝೋನ್ ಅಧ್ಯಕ್ಷರಾದ ಜನಾಬ್ ಅಬ್ದುಲ್ ಅಝೀಝ್ ಬಜ್ಪೆಯವರ ನೇತೃತ್ವದಲ್ಲಿ 2024-2025ರ ಸಾಲಿಗೆ ಈ ಕೆಳಗಿ ಸುದೃಢವಾದ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಕಬೀರ್ ಕಂದಕ್, ಪ್ರಧಾನ ಕಾರ್ಯದರ್ಶಿಯಾಗಿ ಶಾಫಿ ಕಾನ, ಕೋಶಾಧಿಕಾರಿಯಾಗಿ ಹುಸೈನ್ ಕೃಷ್ಣಾಪುರ, ಉಪಾದ್ಯಕ್ಷರುಗಳಾಗಿ ಖಲೀಲ್ ಮಂಜೇಶ್ವರ ಹಾಗೂ ಅಝೀಝ್ ಪೆರ್ನೆ, ಕಾರ್ಯದರ್ಶಿಯಾಗಿ ಶಮೀರ್ ಸಕ್ಲೇಶಪುರ, ಸಲಹೆಗಾರರಾಗಿ ಫಾರೂಕ್ ಬನ್ನೂರು ಹಾಗೂ ಅಬ್ದುಲ್ ಅಝೀಝ್ ಕಾಟಿಪಳ್ಳ, ಸಂಚಾಲಕರಾಗಿ ಇಬ್ರಾಹಿಂ ಮಂಜೇಶ್ವರ, ನೌಫಲ್ ಮನಲ್, ಮುದಸ್ಸಿರ್ ಕೃಷ್ಣಾಪುರ ಹಾಗೂ ಅಫ್ಝಲ್ ಕೆ.ಸಿ.ರೋಡ್ ಆಯ್ಕೆಗೊಂಡರು.
ಮುಖ್ಯ ಅತಿಥಿಗಳಾಗಿ ಸಭೆಯಲ್ಲಿ ಹಾಜರಿದ್ದ ಇಸ್ಮಾಯಿಲ್ ಕನ್ನಂಗಾರ್, ಫಾರೂಕ್ ಬನ್ನೂರು, ಅಝೀಝ್ ಕಾಟಿಪಳ್ಳ ಇವರು ಮಾತನಾಡಿ ನೂತನ ಸಭೆಗೆ ಶುಭಹಾರೈಸಿದರು.
ನೂತನ ಸಮಿತಿಗೆ ಆಯ್ಕೆಗೊಂಡ ಅಧ್ಯಕ್ಪ, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿಗಳಾದ ಕಬೀರ್ ಕಂದಕ್, ಶಾಫಿ ಕಾನ ಹಾಗೂ ಹುಸೈನ್ ಕೃಷ್ಣಾಪುರ ಸಭಿಕರನ್ನುದ್ದೇಶಿಸಿ ಮಾತನಾಡಿ ಮುಂದಿನ ವರ್ಷದಲ್ಲಿ ಎಲ್ಲರ ಸಹಕಾರದೊಂದಿಗೆ ಅತ್ಯುತ್ತಮ ನಿರ್ವಹಣೆಯ ಭರವಸೆಯನಿತ್ತರು.
ನೂತನ ಜತೆಕಾರ್ಯದರ್ಶಿ ಶಮೀರ್ ಸಕ್ಲೇಶಪುರ ಧನ್ಯವಾದಗೈದು ರಿಯಾದ್ ಝೋನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಉಚ್ಚಿಲ ನಿರೂಪಿಸಿದರು.