janadhvani

Kannada Online News Paper

ವಾಹನ ಅಪಘಾತಗಳ ಮೊಬೈಲ್ ಚಿತ್ರೀಕರಣ ಅಪರಾಧ- 10 ಸಾವಿರ ರಿಯಾಲ್ ದಂಡ

ದೋಹಾ: ವಾಹನ ಅಪಘಾತಗಳನ್ನು ಮೊಬೈಲ್ ಫೋನ್‌ಗಳಲ್ಲಿ ವೀಡಿಯೋ ರೆಕಾರ್ಡ್ ಮಾಡುವುದು ಮತ್ತು ಫೋಟೋ ತೆಗೆಯುವವರಿಗೆ ಕತಾರ್ ಆಂತರಿಕ ಸಚಿವಾಲಯ ಎಚ್ಚರಿಕೆ ನೀಡಿದೆ.

ಅಂತಹ ಫೋಟೋಗಳನ್ನು ತೆಗೆಯುವವರಿಗೆ 10,000 ಕತಾರ್ ರಿಯಾಲ್ ದಂಡ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಕತಾರ್‌ನಲ್ಲಿ ಫೋಟೋ ಮತ್ತು ವೀಡಿಯೋ ತೆಗೆಯುವ ಮೂಲಕ ಇನ್ನೊಬ್ಬರ ಖಾಸಗಿತನಕ್ಕೆ ಧಕ್ಕೆ ತರುವುದು ಅಪರಾಧವಾಗಿದೆ.