janadhvani

Kannada Online News Paper

ಇಸ್ರಾಅ್ ಮಿಅ್ ರಾಜ್ ಆಚರಣೆ- ಮೂರು ದಿನಗಳ ಸಾರ್ವಜನಿಕ ರಜೆ

ಮಸ್ಕತ್: ಇಸ್ರಾಅ್ ಮಿಅ್ ರಾಜ್ ಸಂದರ್ಭದಲ್ಲಿ ಒಮಾನ್‌ನಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಫೆಬ್ರವರಿ 8 ರ ಗುರುವಾರ ಸಾರ್ವಜನಿಕ ರಜೆ ಇರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಸ್ರಾಅ್ ಮಿಅ್ ರಾಜ್ ಆಚರಣೆಗಾಗಿ ಫೆಬ್ರವರಿ 8 ರ ಗುರುವಾರ ಒಮಾನ್‌ನಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ಒಮಾನ್ ಸುದ್ದಿ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಮುಂದಿನ ವಾರ ವಾರಾಂತ್ಯದ ರಜಾದಿನಗಳು ಸೇರಿದಂತೆ ಒಮಾನ್‌ನಲ್ಲಿ ಮೂರು ದಿನಗಳ ರಜೆ ಇರುತ್ತದೆ.

error: Content is protected !! Not allowed copy content from janadhvani.com