ಸಮನ್ವಯ ಶಿಕ್ಷಣ ಕ್ಷೇತ್ರದ ಅಪೂರ್ವ ಸಾಧನೆಯ ಹಾದಿಯಲ್ಲಿ ಸಅದಿಯ್ಯಾ ಫೌಂಡೇಶನ್ ಬೆಂಗಳೂರು, 20ರ ವಾರ್ಷಿಕಕ್ಕೆ ನಾಳೆ ಚಾಲನೆ
ಸ್ಲಂ ಮಕ್ಕಳ ಏಳಿಗೆಗಾಗಿ 20ಕೋಟಿಯ ಹ್ಯಾಪಿ ಲಿವಿಂಗ್ ಝೋನ್ ಸಂಸ್ಥೆಗೆ 2ದಶಕಗಳ ಸ್ಮರಣಾರ್ಥ ಚಾಲನೆ ನೀಡಲಿರುವ ಸಂಸ್ಥೆ
2004ರಲ್ಲಿ ಬೆಂಗಳೂರಿನಲ್ಲಿ 10ವಿಧ್ಯಾರ್ಥಿಗಳೊಂದಿಗೆ ಆರಂಭಿಸಿದ ಬೆಂಗಳೂರು ಸಅದಿಯ್ಯಾ ಸಂಸ್ಥೆಯು , ಮಹತ್ವಪೂರ್ಣ ಸಾಧನೆಯೊಂದಿಗೆ 2ದಶಕಗಳು ಪೂರ್ಣಗೊಳಿಸಿದೆ. ಪೂರ್ಣವಾಗಿ ಉಚಿತ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ವಿದ್ಯಾರ್ಥಿಗಳೆಲ್ಲರೂ 95ಶೇಕಡಾ ಬೆಂಗಳೂರು ಆಸುಪಾಸಿನ ಸ್ಲಂ ಏರಿಯಾ ಗಳಲ್ಲಿ ಬೆಳೆದು ಬಂದವರಾಗಿದ್ದಾರೆ.
6ನೇ ತರಗತಿಯಿಂದ ಸಂಸ್ಥೆಗೆ ಸೇರುವ ಮಕ್ಕಳು ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿ ಉನ್ನತ ವಿದ್ಯಾಭ್ಯಾಸ ದ ವರೆಗೆ ಸಂಸ್ಥೆಯು ಅವಕಾಶ ಕಲ್ಪಿಸುತ್ತದೆ. ಕುರ್ ಆನ್ ಹಾಫಿಝ್ ಹಾಗೂ ಹಾಫಿಝತ್ ಗಳು, ಆಲಿಮ್ ,ಆಲಿಮಾತ್ ಗಳು , ಎಸ್ ಎಸ್ ಎಲ್ ಸಿ ಬಳಿಕ ಮಹಿಳೆಯರಿಗಾಗಿ ಲೀಡ್ ಸ್ಟಾರ್ ಮಹಿಳಾ ಕಾಲೇಜ್ ,ಸೈನ್ಸ್ ಕಾಲೇಜ್ ಮತ್ತು ಪದವಿ ವರೆಗೆ ಶಿಕ್ಷಣ ನೀಡುತ್ತಿದೆ.
ಬನ್ನೇರುಘಟ್ಟ ಮತ್ತು ಬನಶಂಕರಿ ಯಲ್ಲಿ ಸಅದಿಯ್ಯಾ ಫೌಂಡೇಶನ್ ಸಂಸ್ಥೆಯನ್ನು ಹೊಂದಿದ್ದು, ಇಲ್ಲಿ ಕಲಿತು ಬೆಳೆದ 22ವಿಧ್ಯಾರ್ಥಿಗಳು ಪೋಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಾಳೆ ಸ ಅದಿಯ್ಯಾ 20ನೇ ವಾರ್ಷಿಕದ ಉದ್ಘಾಟನೆ ಭಾಗವಾಗಿ 50ಜನರು ಇಸ್ಲಾಮಿಕ್ ಬಿಎಡ್ ಮುಗಿಸಿದ ಆಲಿಂ ಗಳಿಗೆ ಮೌಲಾನಾ ಫಾಝಿಲ್ ಅಸ್ ಅದಿ ಬಿರುದು ನೀಡುತ್ತಿದೆ. ಸಂಸ್ಥೆಯ ವತಿಯಿಂದ 20ಮಕ್ಕಳನ್ನು ಸರ್ಕಾರಿ ಉನ್ನತ ಉದ್ಯೋಗ, IAS, IPS, ಜರ್ನಲಿಸಂ, ಕಾನೂನು ತರಬೇತು ಶಿಕ್ಷಣದ ಪೂರ್ಣ ಖರ್ಚು ವಹಿಸಿ ನಿರ್ವಹಿಸುತ್ತಿದೆ.
20ನೇ ವಾರ್ಷಿಕ ಭಾಗವಾಗಿ 20ಕೋಟಿ ವೆಚ್ಚದಲ್ಲಿ ಬನ್ನೇರುಘಟ್ಟ ಸಂಸ್ಥೆಯ ಸಮೀಪ ಖರೀದಿಸಿರುವ ನೂತನ ಸ್ಥಳದಲ್ಲಿ ಸ್ಲಂ ಮಕ್ಕಳ ಅಭಿವೃದ್ಧಿ ಗಾಗಿ ಹ್ಯಾಪಿ ಲಿವಿಂಗ್ ಹೋಮ್ ಎಂಬ ಬೃಹತ್ ಸಮುಚ್ಚಯ ಕ್ಕೆ ಚಾಲನೆ ನೀಡಲಿದೆ.
ಒಂದು ವರ್ಷ ಪೂರ್ಣವಾಗಿ 20ನೇ ವರ್ಷಾಚರಣೆ ಮಾಡಲಿರುವ ಬೆಂಗಳೂರು ಸ ಅದಿಯ್ಯಾ, 20ಬಡ ಸಾಮೂಹಿಕ ವಿವಾಹ ,20ಡಯಾಲಿಸಿಸ್ ರೋಗಿಗಳ ಖರ್ಚು, 20ಸ್ಲಂ ಏರಿಯಾದ ಹೆಣ್ಣು ಮಕ್ಕಳಿಗೆ ಟೈಲರಿಂಗ್ ಉಚಿತ ತರಬೇತಿ ಮತ್ತು ಮೆಷಿನ್ ಹಸ್ತಾಂತರ, 20 ರೋಗಿಗಳ ಚಿಕಿತ್ಸಾ ವೆಚ್ಚ, 20ವೀಲ್ ಚೇಯರ್ ಗಳು ಸಹಿತ 20ಪ್ರಮುಖ ಯೋಜನೆಗಳು ಹಮ್ಮಿಕೊಂಡಿದೆ.
ಸಂಸ್ಥೆಯು ಸ್ವಂತ ಸಮುಚ್ಚಯ ಗಳಲ್ಲಿ 20ವರ್ಷಗಳ ಹಾದಿಯು ಸಾಗಿದ್ದು ,ಭವಿಷ್ಯದ ಬೆಂಗಳೂರಿನ ಸಮನ್ವಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಗುರಿಯೊಂದಿಗೆ ಸಾಗುತ್ತಿದೆ. ನಾಳೆ ಉದ್ಘಾಟನಾ ಸಂಗಮ ಸಿಟಿ ಪ್ಯಾಲೇಸ್ ,ಕೆ.ಎಚ್ ರೋಡ್ , ಲಾಲ್ ಬಾಗ್ ನಲ್ಲಿ ಸಂಜೆ 6ಗಂಟೆಗೆ ನಡೆಯಲಿದ್ದು, ದಕ್ಷಿಣ ಕನ್ನಡ ಸಂಯುಕ್ತ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಙಲ್ ಕೂರತ್ ,ಮುಹಮ್ಮದಲಿ ಸಖಾಫಿ ಕೇರಳ, ಪಲ್ಲಂಗೋಡ್ ಅಬ್ದುಲ್ ಖಾದರ್ ಮದನಿ , ಮುಫ್ತಿ ಶಬ್ಬೀರ್ ಅಹ್ಮದ್ ರಝ್ವಿ ಮಡಿವಾಳ, ಖಾಝಿ ಜುಲ್ಫಿಕರ್ ನೂರಿ ಮಡಿವಾಳ, ಸ್ಪೀಕರ್ ಯುಟಿ ಖಾದರ್, ಸಚಿವರಾದ ಜಮೀರ್ ಅಹಮದ್ ಖಾನ್, ವಕ್ಫ್ ಚೆಯರ್ಮ್ಯಾನ್ ಅನ್ವರ್ ಪಾಷಾ ಸಹಿತ ಹಲವು ಸಾಮಾಜಿಕ, ಶೈಕ್ಷಣಿಕ ನಾಯಕರು ಭಾಗಿಯಾಗಲಿದ್ದಾರೆ.