ದಾರುಲ್ ಮುಸ್ತಫಾ ಮೋರೆಲ್ ಅಕಾಡೆಮಿ ನೆಚ್ಚಬೆಟ್ಟು ಇದರ 8ನೇ ವಾರ್ಷಿಕ ಹಾಗೂ 3ನೇ ಸನದ್ ದಾನ ಮಹಾ ಸಮ್ಮೇಳನವು 2024 ಎಪ್ರಿಲ್ 18-19-20 ದಿನಾಂಕಗಳಲ್ಲಿ ನಡೆಸಲು ತೀರ್ಮಾನಿಸಿದ್ದು. ಅದರ ಭಾಗವಾಗಿ ಬೆಳ್ತಂಗಡಿ ವಲಯ ಪ್ರಚಾರ ಸಮಿತಿಯು 26/01/2024 ಶುಕ್ರವಾರ 3 ಗಂಟೆಗೆ ಸರಿಯಾಗಿ ಜುಮಾ ಮಸ್ಜಿದ್ ಪರಪ್ಪುವಿನಲ್ಲಿ ಜರಗಿತು.
ದಾರುಲ್ ಮುಸ್ತಫಾ ಫೌಂಡರ್ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಬಾಅಲವಿ ಸಾದಾತ್ ತಂಙಳ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಬದ್ರುದ್ದೀನ್ ಅಲ್ ಹಾದಿ ತಂಙಳ್ ಪೊಮ್ಮಾಜೆ ಮತ್ತು ಆದಂ ಅಹ್ಸನಿ ಮುದರ್ರಿಸ್ ಗುರುವಾಯನಕೆರೆ, ಹಮೀದ್ ಫೈಝಿ ಕಿಲ್ಲೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಬಳಿಕ ಹಂಝ ಮದನಿ ಗುರುವಾಯನಕೆರೆ ಸಮಿತಿ ರಚನೆಗೆ ನೇತೃತ್ವ ನೀಡಿದರು.
ಗೌರವ ನಿರ್ದೇಶಕರು :
▪️ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಬಾ ಅಲವಿ ಸಾದಾತ್ ತಂಗಳ್ ಗುರುವಾಯನಕೆರೆ
▪️ಅಸ್ಸಯ್ಯಿದ್ ಫಝಲ್ ಜಮಲುಲ್ಲೈಲಿ ತಂಙಳ್ ಸಬರಬೈಲು
▪️ಆದಂ ಅಹ್ಸನಿ ಉಸ್ತಾದ್ ತುರ್ಕಳಿಕೆ
ಚೆಯರ್ಮ್ಯಾನ್ :
▪️ಬದ್ರುದ್ದೀನ್ ಅಲ್ ಹಾದಿ ತಂಙಳ್ ಪೊಮ್ಮಾಜೆ
ಕನ್ವೀನರ್ :ಸಲೀಮ್ ಕನ್ಯಾಡಿ
ಕಾರ್ಯಾಧ್ಯಕ್ಷರು: ಹಂಝ ಮದನಿ ಗುರುವಾಯನಕೆರೆ
ಕೋಶಾಧಿಕಾರಿ : ನಝೀರ್ ಹಾಜಿ ಮಡಂತ್ಯಾರು
ವೈಸ್ ಚಯರ್ಮ್ಯಾನ್ :
▪️ಅಬೂಬಕ್ಕರ್ ಹಾಜಿ ಪರಪ್ಪು
▪️ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು
▪️ಹಮೀದ್ ಫೈಝಿ ಕಿಲ್ಲೂರು
▪️ಇಸ್ಮಾಯಿಲ್ ಹಾಜಿ ಆಳಕ್ಕೆ
▪️ಅಬೂಬಕ್ಕರ್ ಹಾಜಿ ಆಳಕ್ಕೆ
ವೈಸ್ ಕನ್ವೀನರ್ :
▪️ಫಾರೂಕ್ ಸಖಾಫಿ ವೇಣೂರು
▪️ರಝಾಕ್ ಸಖಾಫಿ ಮಡಂತ್ಯಾರು
▪️ಶಾಫಿ ಮದನಿ ಪಾಂಡವರಕಲ್ಲು
▪️ಕಾಸಿಂ ಮುಸ್ಲಿಯಾರ್ ಮಾಚಾರ್
▪️ಅಬ್ದುಲ್ ರಹ್ಮಾನ್ ಸಖಾಫಿ
ಹಾಗೂ 27 ಸದಸ್ಯರುಗಳನ್ನೊಳಗೊಂಡ 43 ಮಂದಿಯ ಸಧೃಡ ಪ್ರಚಾರ ಸಮಿತಿಯನ್ನು ರೂಪೀಕರಿಸಲಾಯಿತು.
ವೇದಿಕೆಯಲ್ಲಿ ಪರಪ್ಪು ಜುಮಾ ಮಸೀದಿಯ ಖತೀಬರಾದ ತಾಜುದ್ದೀನ್ ಸಖಾಫಿ ಮಸೀದಿ ಅಧ್ಯಕ್ಷರು ಅಬೂಬಕ್ಕರ್ ಹಾಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರು ಸ್ವಾಗತಿಸಿದರೆ ನೂತನ ಪ್ರಚಾರ ಸಮಿತಿ ಕನ್ವೀನರ್ ಸಲೀಮ್ ಕನ್ಯಾಡಿ ವಂದಿಸಿದರು.