ಮನಾಮ: ಭೇಟಿ ವೀಸಾದಲ್ಲಿ ಬಹ್ರೇನ್ಗೆ ಆಗಮಿಸುವವರು ನಂತರ ಕೆಲಸದ ಪರವಾನಗಿಗಳನ್ನು ಪಡೆಯುವುದನ್ನು ಕಾನೂನು ರೀತ್ಯಾ ನಿಷೇಧಿಸುವಂತೆ ಬಹ್ರೇನ್ ಸಂಸತ್ತಿನ ಸದಸ್ಯರು ಒತ್ತಾಯಿಸಿದ್ದಾರೆ. ಐವರು ಸಂಸದರ ನೇತೃತ್ವದಲ್ಲಿ ಈ ವಿಷಯದ ಕುರಿತು ಕಾನೂನು ತಿದ್ದುಪಡಿಗೆ ಬೇಡಿಕೆ ಮುಂದಿಟ್ಟಿದ್ದಾರೆ. ಸಂಸತ್ತಿನ ಸದಸ್ಯರು 1965 ರ ವಿದೇಶಿಯರ (ವಲಸೆ ಮತ್ತು ರೆಸಿಡೆನ್ಸಿ) ಕಾಯಿದೆಗೆ ತಿದ್ದುಪಡಿ ಮಾಡುವ ಪ್ರಸ್ತಾಪದ ಪರವಾಗಿ ಸರ್ವಾನುಮತದಿಂದ ಮತ ಚಲಾಯಿಸಿದರು. ಆದರೆ, ಪ್ರವಾಸೋದ್ಯಮ ಸಚಿವಾಲಯವು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.
ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ, ಈ ಕ್ರಮವು ಪ್ರವಾಸೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಕಾನೂನು ಪ್ರವಾಸಿಗರಲ್ಲಿ ಅಪನಂಬಿಕೆಗೆ ಕಾರಣವಾಗುತ್ತದೆ ಮತ್ತು ವೀಸಾ ದುರ್ಬಳಕೆಯನ್ನು ಆಡಳಿತಾತ್ಮಕ ಕ್ರಮಗಳ ಮೂಲಕ ವ್ಯವಹರಿಸಬೇಕು ಮತ್ತು ಕಾನೂನಿನ ಮೂಲಕ ಅಲ್ಲ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ. ಈ ರೀತಿ ಕಾನೂನು ಬಂದರೆ ಪ್ರವಾಸಿಗರ ಆಗಮನಕ್ಕೆ ಅಡ್ಡಿಯಾಗಬಹುದು.
ಆದರೆ ಆರು ತಿಂಗಳೊಳಗೆ ಎಂಟು ಸಾವಿರಕ್ಕೂ ಹೆಚ್ಚು ವಿಸಿಟ್ ವೀಸಾಗಳನ್ನು ವರ್ಕ್ ಪರ್ಮಿಟ್ ಆಗಿ ಪರಿವರ್ತಿಸಿರುವುದು ಸ್ವೀಕಾರಾರ್ಹವಲ್ಲ ಎಂದು ಸಂಸದರು ಗಮನ ಸೆಳೆದರು. 2019 ರಿಂದ ಜೂನ್ 2023 ರವರೆಗೆ 85,246 ವಲಸಿಗರನ್ನು ಸಂದರ್ಶಕರ ವೀಸಾಗಳಿಂದ ಕೆಲಸದ ಪರವಾನಗಿಗಳಿಗೆ ಪರಿವರ್ತಿಸಲು ಅನುಮತಿ ಲಭಿಸಿದೆ.
















ಇನ್ನಷ್ಟು ಸುದ್ದಿಗಳು
DKSC ಮುಡಿಪುವಿನ ಶಿಕ್ಷಣ ಕ್ರಾಂತಿಗೆ ಸಮುದಾಯದ ಸಹಕಾರ ಅಗತ್ಯ- ಝಕರಿಯ್ಯ ಅಲ್ ಮುಝೈನ್
ಕೆಸಿಎಫ್ ಸದಸ್ಯತ್ವ ಅಭಿಯಾನ: ಯಶಸ್ವಿಗೊಳಿಸಲು SSF ಕರ್ನಾಟಕ ರಾಜ್ಯ ಸಮಿತಿ ಕರೆ
ಸೌದಿಯಲ್ಲಿ ನಕಲಿ ದಾಖಲೆ ದೃಢೀಕರಣ ಜಾಲ: ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇಕ್ಬಾಲ್ ಬಾಳಿಲರಿಗೆ SKSSF ರಾಜ್ಯ ಸಮಿತಿಯಿಂದ ಸನ್ಮಾನ
ಮದೀನಾ ತಲುಪಬೇಕೆಂಬ ತಾಯಿಯ ಕೊನೆಯ ಆಸೆ ಈಡೇರಿತು- ಜನ್ನತುಲ್ ಬಕೀಹ್ನಲ್ಲಿ ಅಂತ್ಯಕ್ರಿಯೆ
ಎಸ್ಐಆರ್ ಪ್ರಕ್ರಿಯೆ ರದ್ದತಿಗೆ ಆಗ್ರಹಿಸಿ ರಾಜ್ಯಾದ್ಯಂತ SKSSF ಬೃಹತ್ ಪ್ರತಿಭಟನೆ
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ಸಮಸ್ತ ಉಪಾಧ್ಯಕ್ಷ ಸಯ್ಯಿದ್ ಅಲಿ ಬಾಫಖಿ ತಂಙಳ್ ವಫಾತ್
ದಕ್ಷಿಣ ಕನ್ನಡ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ಬಹರೈನ್: ನೂತನ ಪದಾಧಿಕಾರಿಗಳು
ಇಕ್ಬಾಲ್ ಬಾಳಿಲರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ