janadhvani

Kannada Online News Paper

ಒಮಾನ್‌ಗೆ ಪ್ರವೇಶಿಸಲು ಭಾರತೀಯರಿಗೆ ವೀಸಾ ಅಗತ್ಯವಿಲ್ಲ- ಇದು ನಿಜವೇ..?

ಎರಡು ವಾರಗಳ ಹಿಂದೆ, ಒಮಾನ್ ಮತ್ತು ಕತಾರ್‌ಗೆ ಪ್ರವೇಶಿಸಲು ಭಾರತೀಯರಿಗೆ ವೀಸಾ ಅಗತ್ಯವಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿತ್ತು.

ಮಸ್ಕತ್: ಒಮಾನ್‌ಗೆ ಪ್ರವೇಶಿಸಲು ಭಾರತೀಯರಿಗೆ ವೀಸಾ ಅಗತ್ಯವಿಲ್ಲ ಎಂದು ಹರಡಿರುವ ಸುದ್ದಿ ನಿರಾಧಾರ ಎಂದು ರಾಯಲ್ ಒಮಾನ್ ಪೊಲೀಸರು ಹೇಳಿದ್ದಾರೆ. ಒಮಾನ್‌ನ ವೀಸಾ ನೀತಿಯಲ್ಲಿ ಇತ್ತೀಚೆಗೆ ಯಾವುದೇ ಬದಲಾವಣೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ವಾರಗಳ ಹಿಂದೆ, ಒಮಾನ್ ಮತ್ತು ಕತಾರ್‌ಗೆ ಪ್ರವೇಶಿಸಲು ಭಾರತೀಯರಿಗೆ ವೀಸಾ ಅಗತ್ಯವಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿತ್ತು. ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಈಗ ಒಮಾನ್ ಮತ್ತು ಕತಾರ್‌ಗೆ ವೀಸಾ ಮುಕ್ತವಾಗಿ ಪ್ರಯಾಣಿಸಬಹುದು. ಕೆಲವು ಆನ್‌ಲೈನ್ ಪೋರ್ಟಲ್‌ಗಳು ಭಾರತೀಯರು ವೀಸಾ ಇಲ್ಲದೆ ಅಥವಾ ಆನ್-ಅರೈವಲ್ ವೀಸಾ ಮೂಲಕ ಪ್ರಯಾಣಿಸಬಹುದಾದ ಇತರ 62 ದೇಶಗಳಲ್ಲಿ ಕೇವಲ ಎರಡು ಜಿಸಿಸಿ ದೇಶಗಳು ಮಾತ್ರ ಇವೆ ಎಂಬ ಸುದ್ದಿಯನ್ನು ಪ್ರಕಟಿಸಿತ್ತು.

ಇಂತಹ ವರದಿಗಳು ಅಥವಾ ಪ್ರಕಟಣೆಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ರಾಯಲ್ ಒಮಾನ್ ಪೊಲೀಸ್ ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಮೇಜರ್ ಮುಹಮ್ಮದ್ ಅಲ್ ಹಶ್ಮಿ ಹೇಳಿದ್ದಾರೆ. ಯುಎಸ್ಎ, ಕೆನಡಾ ಮತ್ತು ಯುರೋಪ್ ವೀಸಾ ಹೊಂದಿರುವ ಭಾರತೀಯರು ಆನ್ ಅರೈವಲ್ ವೀಸಾ ಪಡೆಯಬಹುದು. ಯುರೋಪಿಯನ್, ಅಮೇರಿಕನ್ ಮತ್ತು ಕೆನಡಾದ ನಿವಾಸ ವೀಸಾಗಳನ್ನು ಹೊಂದಿರುವ ಭಾರತೀಯರು ಒಮಾನ್‌ನಲ್ಲಿ 14 ದಿನಗಳ ವಾಸ್ತವ್ಯಕ್ಕಾಗಿ ವೀಸಾ ಮುಕ್ತವಾಗಿ ಒಮಾನ್‌ಗೆ ಪ್ರವೇಶಿಸಬಹುದು ಎಂದು ಅಲ್ ಹಶ್ಮಿ ಹೇಳಿದರು. ಆಗಮನದ ನಂತರ ಅವರಿಗೆ ತ್ವರಿತವಾಗಿ ವೀಸಾ ಲಭಿಸಲಿದೆ.

error: Content is protected !! Not allowed copy content from janadhvani.com