ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ಇದರ ಕುವೈಟ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಯೂಸುಫ್ ಶಿರ್ವ, ಮಂಚಕಲ್ ರವರು ಸೌದಿ ಅರೇಬಿಯಾದ ದಮ್ಮಾಂ ಗೆ ಭೇಟಿ ನೀಡಿದ್ದ ಸಂದರ್ಭ ಡಿಕೆಯಸ್ಸಿ ದಮ್ಮಾಂ ವಲಯ ಹಾಗೂ ಘಟಕದ ವತಿಯಿಂದ ಶಾಲು ಹೊದಿಸಿ ಆದರಪೂರ್ವಕ ಸನ್ಮಾನಿಸಲಾಯಿತು.
19, ಜನವರಿ 2024 ಶುಕ್ರವಾರ ದಮ್ಮಾಂನಲ್ಲಿ ನಡೆದ ಈ ಸಮಾರಂಭದಲ್ಲಿ ಡಿಕೆಯಸ್ಸಿ ದಮ್ಮಾಂ ಘಟಕ ಅಧ್ಯಕ್ಷ ಸಯ್ಯಿದ್ ಬಾವ ಬಜ್ಪೆ, ಡಿಕೆಯಸ್ಸಿ ಕೇಂದ್ರ ಸಮಿತಿ ಕಾರ್ಯದರ್ಶಿ ಮುಹಮ್ಮದ್ ಹಸನ್ ಮೂಡುತೋಟ, ದಮ್ಮಾಂ ವಲಯ ಮಾಜಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮೂಡುತೋಟ, ಡಿಕೆಯಸ್ಸಿ ಖಾದಿಂ ಇಸ್ಮಾಯೀಲ್ ಕಾಟಿಪಳ್ಳ ಮೊದಲಾದವರು ಹಾಜರಿದ್ದರು.
ಡಿಕೆಯಸ್ಸಿಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮುಹಮ್ಮದ್ ಹಸನ್ ಮೂಡುತೋಟ ರವರು ಅವರೊಂದಿಗೆ ಸಮಾಲೋಚನೆ ನಡೆಸಿದರು.
ಸನ್ಮಾನ ಸಮಾರಂಭ ಸ್ವೀಕರಿಸಿದ ಯೂಸುಫ್ ರವರು ಡಿಕೆಯಸ್ಸಿ ಯ ಇದೇ ರೀತಿಯ ಭಾಂದವ್ಯ ಮುಂದುವರಿದು ನಮ್ಮ ಪ್ರವರ್ತನೆಗಳು ಇಹ-ಪರ ಯಶಸ್ವಿಗೆ ಕಾರಣವಾಗಲಿ ಎಂದು ಪ್ರಾರ್ಥಿಸಿದರು.
ಇಸ್ಮಾಯೀಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.