ಲಕ್ನೋ: ತಮಿಳುನಾಡಿನಿಂದ ಅಯೋಧ್ಯೆಗೆ ಪಟಾಕಿಗಳನ್ನು ಸಾಗಿಸುತ್ತಿದ್ದ ಟ್ರಕ್ ಬೆಂಕಿಗೆ ಆಹುತಿಯಾದ ಘಟನೆ ಉತ್ತರ ಪ್ರದೇಶದ ಉನ್ನಾವೊದ ಪೂರ್ವ ಕೊಟ್ವಾಲಿಯ ಖಾರ್ಗಿ ಖೇಡಾ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಜನವರಿ 22 ರಂದು ರಾಮ ಮಂದಿರದಲ್ಲಿ ಪ್ರತಿಷ್ಠಾಪನಾ ಸಮಾರಂಭಕ್ಕಾಗಿ ಪಟಾಕಿ ತುಂಬಿದ ಟ್ರಕ್ ಅಯೋಧ್ಯೆಗೆ ತೆರಳುತ್ತಿತ್ತು ಎಂದು ಹೇಳಲಾಗಿದೆ. ಸುಮಾರು 3 ಗಂಟೆಗಳ ಕಾಲ ರಸ್ತೆ ಮಧ್ಯೆಯೆ ಲಾರಿಯಲ್ಲಿದ್ದ ಪಟಾಕಿಗಳು ನಿರಂತರವಾಗಿ ಸಿಡಿದಿವೆ. ಇಡೀ ಲಾರಿ ಸುಟ್ಟು ಕರಕಲಾಗಿದೆ.ಸ್ಥಳೀಯರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಪಟಾಕಿ ಸಿಡಿಯುತ್ತಿರುವ ವೀಡಿಯೋ👇